ಬೆಳ್ತಂಗಡಿ : ಚಾರ್ಮಾಡಿ ಕಡೆಯಿಂದ ಉಜಿರೆ ಕಡೆಗೆ ಬರುತ್ತಿದ್ದ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ 3 ಕಾರುಗಳಿಗೆ ಮತ್ತು ಒಂದು ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ಉಜಿರೆಯಲ್ಲಿ ಜು. 04 ರಂದು ನಡೆದಿದೆ
ಖಾಸಗಿ ವಿದ್ಯಾ ಸಂಸ್ಥೆಯ ಶಾಲಾ ಬಸ್, ನಿಯಂತ್ರಣ ತಪ್ಪಿ ಮಾರುತಿ ರಿಟ್ಸ್, ಮಾರುತಿ ಬಲೆನೋ, ಮಾರುತಿ ಬ್ರೆಝಾ ಮತ್ತು ಒಂದು ಬೈಕ್ ಡಿಕ್ಕಿಹೊಡೆದಿದೆ. ಕಾರುಗಳು ಹಾಗೂ ಬೈಕ್ ಜಖಂಗೊಂಡಿದೆ. ಯಾರಿಗೂ ಹೆಚ್ಚಿನ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
