Home ರಾಜಕೀಯ ಸಮಾಚಾರ ಶಿಶಿಲ ಸೇತುವೆ ಕಾಮಗಾರಿಗೆ 499.36 ಲಕ್ಷ ಅನುದಾನ ಮಂಜೂರು. ರಕ್ಷಿತ್ ಶಿವರಾಂ

ಶಿಶಿಲ ಸೇತುವೆ ಕಾಮಗಾರಿಗೆ 499.36 ಲಕ್ಷ ಅನುದಾನ ಮಂಜೂರು. ರಕ್ಷಿತ್ ಶಿವರಾಂ

0

ಬೆಳ್ತಂಗಡಿ;  ಶಿಶಿಲ ಸೇತುವೆ ಕಾಮಗಾರಿಗೆ ರಾಜ್ಯ ಸರಕಾರದ  ಲೋಕೋಪಯೋಗಿ ಇಲಾಖೆಯಿಂದ 499.36 ಲಕ್ಷ ಅನುದಾನ ಮಂಜೂರಾಗಿದ್ದು ಈ ಬಗ್ಗೆ ಸರಕಾರ ಆದೇಶ ಹೊರಡಿಸಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ.

ತಾಲೂಕಿನ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ಬಳಿ ಕಪಿಲ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಸನ್ಮಾನ್ಯ ಮುಖ್ಯಮಂತ್ರಿಯವರ ಟಿಪ್ಪಣಿ ಮೇರೆಗೆ 275.00ಲಕ್ಷಗಳ ಅನುದಾನ(ಲೆ.ಶೀ.5054-03-101-0-02-132 ಪ್ರಮುಖ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ) ಬಿಡುಗಡೆಗೆ ಆದೇಶವಾಗಿದ್ದು . ಅದರೆ ಸದ್ರಿ ಸೇತುವೆ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ಅಂದಾಜು ಮೊತ್ತದಂತೆ ಈ ಕಾಮಗಾರಿಗೆ 499.36 ಲಕ್ಷಗಳ ಅನುದಾನ ಬೇಕಾಗಿದ್ದು. ಈ ಕಾಮಗಾರಿಗೆ ಹೆಚ್ಚುವರಿ ಅನುದಾನ ಬಿಡುಗಡೆಗೆ,’ ಅನುದಾನ ಬಿಡುಗಡೆ ಮಾಡುವಂತೆ ಲೋಕೋಪಯೋಗಿ ಸಚಿವರು ಬೆಳ್ತಂಗಡಿಗೆ ಬೇಟಿ ನೀಡಿದ ಸಂದರ್ಭದಲ್ಲಿ  ಮನವಿಯನ್ನು ಮಾಡಿದ್ದು  ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವರು
ಬೆಳ್ತಂಗಡಿ ತಾಲ್ಲೂಕು ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ಬಳಿ ಕಪಿಲ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿ 499.36 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅನುದಾನವನ್ನು ಬಿಡುಗಡೆ ಮಾಡಿದ ಸರ್ಕಾರಕ್ಕೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version