Home ಸ್ಥಳೀಯ ಸಮಾಚಾರ ಶ್ರೀ ಕ್ಷೇತ್ರ ಬಂಗಾಡಿ ಸತ್ಯಸಾರಮಾನಿ ಕಾನದ ಕಟದ ದೈವಸ್ಥಾನದ ವಾರ್ಷಿಕ ಪರ್ವ ಮತ್ತು ಜೀರ್ಣೋದ್ಧಾರ ವಿಜ್ನಾಪನಾ...

ಶ್ರೀ ಕ್ಷೇತ್ರ ಬಂಗಾಡಿ ಸತ್ಯಸಾರಮಾನಿ ಕಾನದ ಕಟದ ದೈವಸ್ಥಾನದ ವಾರ್ಷಿಕ ಪರ್ವ ಮತ್ತು ಜೀರ್ಣೋದ್ಧಾರ ವಿಜ್ನಾಪನಾ ಪತ್ರ ಬಿಡುಗಡೆ

1
0

ಶ್ರೀ ಕ್ಷೇತ್ರ ಬಂಗಾಡಿ ಸತ್ಯಸಾರಮಾನಿ ಕಾನದ ಕಟದ ದೈವಸ್ಥಾನದ ವಾರ್ಷಿಕ ಪರ್ವ ಮತ್ತು ಜೀರ್ಣೋದ್ಧಾರ ವಿಜ್ನಾಪಣಾ ಪತ್ರ ಬಿಡುಗಡೆ
ಕಾರ್ಯಕ್ರಮವನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ
ಶಾಸಕರಾದ ಕು ಭಾಗೀರಥಿ ಮುರುಳ್ಯ ರವರು
ಉದ್ಘಾಟನೆ ಮಾಡಿ ‘ ಸತ್ಯಸಾರಮಾನಿ ಕಾನದ ಕಟದರ ಜನ್ಮಭೂಮಿಯಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಆಗಲಿರುವುದು ಸಂತೋಷದ ವಿಚಾರ ಈ ಕಾರ್ಯಕ್ಕೆ ಸರಕಾರದ ವತಿಯಿಂದ
ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವಲ್ಲಿ
ನಾನು ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಸಮಾರಂಭದಲ್ಲಿ ಗ್ಯಾರಿಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷರಾದ  ಶೇಖರ್ ಕುಕ್ಕೇಡಿ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ” ಶ್ರೀ ಸತ್ಯಸಾರಮಾನಿ ಕಾನದ ಕಟದ ಮೂಲಕ್ಷೇತ್ರ ಅಲೇರಿಯ ಅಭಿವ್ರದ್ದಿಗೆ ಈಗಾಗಲೇ ಶಿಲನ್ಯಾಸ ನೆರವೇರಿದ ಇದೇ ಸಂಧರ್ಭದಲ್ಲಿ ಕಾನದ ಕಟದ ಜನ್ಮಭೂಮಿ ಬಂಗಾಡಿ ಯಲ್ಲೂ ಅಭಿವ್ರದ್ದಿಗೆ ಚಾಲನೆ ಅಗುತ್ತಿರುವುದು ಸಂತೋಷದ ವಿಚಾರ
ಕಾನದ ಕಟದರ ಕುಲಬಾಂಧವರಾದ ನಾವುಗಳು ಮನೆಮನೆಗಳಿಗೆ ಈ ವಿಚಾರವನ್ನು ತಿಳಿಸಿ
ಜೀರ್ಣೋದ್ಧಾರದ ಬಗ್ಗೆ ಅರ್ಥಿಕ ಕ್ರೋಢೀಕಣಕ್ಕೆ
ನಾವೆಲ್ಲರೂ ಒಂದಾಗಿ ಕೈ ಜೋಡಿಸಬೇಕು
ಎಂದು ಹೇಳಿದರು.

ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಹರಿಯಪ್ಪ ಮುತ್ತೂರು ರವರು ಮಾತನಾಡುತ್ತಾ ಶ್ರೀ ಕ್ಷೇತ್ರ ಬಂಗಾಡಿ ಸತ್ಯಸಾರಮಾನಿ ಕಾನದ ಕಟದ ಜನ್ಮಭೂಮಿ
ಯು ಅಭಿವೃದ್ಧಿಗೆ ಸರ್ಕಾರ ವತಿಯಿಂದ
ಅನುದಾನ ಕೊಡಿಸುವಲ್ಲಿ ಸಹಕಾರ ನೀಡುತ್ತೇನೆ
ಈ ಕ್ಷೇತ್ರ ಜನಸಾಮಾನ್ಯರ ಧಾರ್ಮಿಕ ಕ್ಷೇತ್ರವಾಗಿ ಮೂಡಿ ಬರಲಿ ಎಂದು ಶುಬಹಾರೈಸಿದರು.
ಬೆಳ್ತಂಗಡಿ ತಾಲೂಕು ಕೆಡಿಪಿ ಸದಸ್ಯರಾದ ಎಸ್ ಬೇಬಿ ಸುವರ್ಣ ರವರು ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಬಂಗಾಡಿ ಇದರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸಂಜೀವ ಆರ್ ರವರು ಕ್ಷೇತ್ರದ ಅಭಿವೃದ್ಧಿ ಗೆ
ಎಲ್ಲರ ಸಹಕಾರ ಕೋರಿದರು.
ಸಮಾರಂಭದ ವೇದಿಕೆಯಲ್ಲಿ ಮಹಿಳಾ ಸಮಿತಿಯ ಅಧ್ಯಕ್ಷರಾದ  ಬೇಬಿ ಕಡಿರುದ್ಯಾವರ ,ಆಡಳಿತ ಸಮಿತಿ ನಿಕಟಪೂರ್ವ ಅಧ್ಯಕ್ಷರಾದ  ಗೋಪಾಲ ಇಂದಬೆಟ್ಟು,ಮುಖಂಡರುಗಳಾದ ಬಿ.ಕೆ ವಸಂತ್ ನೇಮಿರಾಜ್ ಕಿಲ್ಲೂರು, ರಮೇಶ್ ಆರ್ ಹಾಗೂ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here