ಬೆಳ್ತಂಗಡಿ : ಶಬರಿಮಲೆ ಯಾತ್ರೆ ವೇಳೆ ಮಂಗಳೂರಿನಿಂದ ಕೇರಳಕ್ಕೆ ರೈಲು ಮೂಲಕ ಸಂಚಾರಿಸುತ್ತಿದ್ದಾಗ ಏ.17 ರಂದು ರಾತ್ರಿ ರೈಲಿನಿಂದ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಬಜ ನಿವಾಸಿ ಕೃಷಿಕರಾಗಿರುವ ವಸಂತ ಪೂಜಾರಿ(60) ಎಂಬವರು ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೆ ಕೇರಳದ ತ್ರಿಶೂರ್ ಆಸ್ಪತ್ರೆಯಲ್ಲಿ ಏ.18 ರಂದು ಮೃತಪಟ್ಟದ್ದಾರೆ.
ಮೃತದೇಹದ ಶವಪರೀಕ್ಷೆ ಏ.18 ರಂದು ನಡೆಸಿ ಮೃತದೇಹವನ್ನು ಬೆಳ್ತಂಗಡಿ ಮನೆಗೆ ಏ.19 ರಂದು ಬೆಳಗ್ಗೆ ತರಲಾಗಿದೆ.









