Home ಅಪಘಾತ ಧರ್ಮಸ್ಥಳ: ದ್ವಿಚಕ್ರ ವಾಹನ – ಇನೋವಾ ಕಾರು ನಡುವೆ ಅಪಘಾತ; ದ್ವಿಚಕ್ರ ವಾಹನ ಸವಾರನಿಗೆ ಗಂಭೀರ...

ಧರ್ಮಸ್ಥಳ: ದ್ವಿಚಕ್ರ ವಾಹನ – ಇನೋವಾ ಕಾರು ನಡುವೆ ಅಪಘಾತ; ದ್ವಿಚಕ್ರ ವಾಹನ ಸವಾರನಿಗೆ ಗಂಭೀರ ಗಾಯ

2
0

ಬೆಳ್ತಂಗಡಿ :  ಇನೋವಾ ಕಾರು  ಮತ್ತು ದ್ವಿಚಕ್ರ ವಾ‌ಹನದ ನಡುವೆ ಅಪಘಾತ ಸಂಭವಿಸಿದ ಪರಿಣಾಮ ದ್ವಿಚಕ್ರ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಧರ್ಮಸ್ಥಳ ಗ್ರಾಮದ ಬೊಳಿಯಾರ್ ನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬೊಳಿಯಾರ್ ನಲ್ಲಿ ಏ.11 ರಂದು ಬೆಳಗ್ಗೆ 6:30 ರ ಸುಮಾರಿಗೆ ಇನೋವಾ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತವಾಗಿದೆ.  ದ್ವಿಚಕ್ರ ವಾಹನ ಸವಾರ ಧರ್ಮಸ್ಥಳ ಗ್ರಾಮದ ದೊಂಡೊಲೆ ನಿವಾಸಿ ಅಶೋಕ್ ಭಟ್(65) ಎಂಬವರ ಕಾಲಿಗೆ ಗಂಭೀರ ಗಾಯವಾಗಿದ್ದು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here