Home ಅಪರಾಧ ಲೋಕ ಬೆಳ್ತಂಗಡಿ : ಕೊಕ್ಕಡ ಬಾರ್ ನಲ್ಲಿ ಇಬ್ಬರ ಮೇಲೆ ಹಲ್ಲೆ; ನಾಲ್ಕು ಜನ ಆರೋಪಿಗಳ ವಿರುದ್ಧ...

ಬೆಳ್ತಂಗಡಿ : ಕೊಕ್ಕಡ ಬಾರ್ ನಲ್ಲಿ ಇಬ್ಬರ ಮೇಲೆ ಹಲ್ಲೆ; ನಾಲ್ಕು ಜನ ಆರೋಪಿಗಳ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

2
0

ಬೆಳ್ತಂಗಡಿ : ಕೊಕ್ಕಡ ಬಾರ್ & ರೆಸ್ಟೋರೆಂಟ್ ನಲ್ಲಿ ಮದ್ಯ ಸೇವಿಸುವ ಸಮಯದಲ್ಲಿ ಹಣಕಾಸಿನ ವಿಚಾರದಲ್ಲಿ ನಾಲ್ಕು ಜನ ಆರೋಪಿಗಳು ಹಲ್ಲೆ ಮಾಡಿದ್ದು.ಈ ವೇಳೆ ರಕ್ಷಣೆ ಮಾಡಲು ಬಂದ ಮತ್ತೊಬ್ಬನ ಮೇಲೂ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಕೊಕ್ಕಡ ಸಾಲಿಯಾನ್ ಬಾರ್ & ರೆಸ್ಟೋರೆಂಟ್ ನಲ್ಲಿ ಮಾ.29 ರಂದು ರಾತ್ರಿ 9 ಗಂಟೆಗೆ ಕೊಕ್ಕಡ ಗ್ರಾಮದ ಹೊಸ ಮನೆ ನಿವಾಸಿ ಅಕ್ಷಯ್(31) ಎಂಬವರು ಮದ್ಯ ಸೇವಿಸಲು ಕುಳಿತಿರುವ ಸಮಯದಲ್ಲಿ ಯತೀಶ್ ಎಂಬಾತ ಬಂದು ಅವ್ಯಾಚ ಶಬ್ದಗಳಿಂದ ಬೈದು ದೀಕ್ಷಿತ್ ಗೆ ಹಣ ಕೊಡು ಎಂದು ಹೇಳುತ್ತಾ ಅಕ್ಷಯ್ ಕುತ್ತಿಗೆ ಪಟ್ಟಿಯನ್ನು ಹಿಡಿದು ಎಳೆದುಕೊಂಡು ಬಾರ್ ಹಿಂಬದಿಗೆ ಹೋಗಿ ಯತೀಶ್, ಧನುಷ್ ಭಂಡಾರಿ, ಶರತ್ ಭಂಡಾರಿ,ಪ್ರವೀಣ್ ರವರು ಸೇರಿಕೊಂಡು ಸಮಾನ ಉದ್ದೇಶದಿಂದ ಕೈಯಿಂದ ಮತ್ತು ಪ್ಲಾಸ್ಟಿಕ್ ಪೈಪಿನಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದು ಬೆದರಿಕೆ ಹಾಕಿ ದೂಡಿ ಹಾಕಿದ ಸಮಯದಲ್ಲಿ ಬೊಬ್ಬೆ ಹಾಕಿದ ಸಮಯದಲ್ಲಿ ಗಲಾಟೆ ಬಿಡಿಸಲು ಬಂದ ಸಂದೀಪ್ ಎಂಬವರಿಗೂ ಪ್ಲಾಸ್ಟಿಕ್ ಪೈಪು ಮತ್ತು ಕೈಯಿಂದ ಹಲ್ಲೆ ನಡೆಸಿ ಅವ್ಯಾಚ ಶಬ್ದಗಳಿಂದ ಬೈದು ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಅಕ್ಷಯ್ ನೀಡಿದ ದೂರಿನ ಮೇರೆಗೆ ಕಲಂ 352,115(2),118(1),351(2) R/w 3(5) BNS -2023 ಅಡಿಯಲ್ಲಿ ಆರೋಪಿಗಳಾದ ಯತೀಶ್, ಧನುಷ್ ಭಂಡಾರಿ,ಶರತ್ ಭಂಡಾರಿ, ಪ್ರವೀಣ್ ವಿರುದ್ಧ ಮಾ.31 ರಂದು ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here