ಬೆಳ್ತಂಗಡಿ : ಹಲವಾರು ಮಹಿಳೆಯರು ಮಾಡಿದ ಆರೋಪಗಳ ಮೇಲೆ ಅಮಾನತುಗೊಂಡಿದ್ದ ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಗಿದ್ದ ಸಂದೇಶ್.ಪಿ.ಜಿ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಮಾ.21 ರಂದು ಮುಖ್ಯ ಶಿಕ್ಷಕಿಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಪ್ರಕರಣದ ತನಿಖೆಗೆ ಸಿಐಡಿ ತಂಡ ಬೆಳ್ತಂಗಡಿಗೆ ಆಗಮಿಸಿದೆ.
ವೇಣೂರು ಪೊಲೀಸ್ ಠಾಣೆಯಿಂದ ಮಾ.25 ರಂದು ಬೆಂಗಳೂರು ಸಿಐಡಿ ಕಚೇರಿಗೆ ಹಸ್ತಾಂತರಿಸಿದ ಬಳಿಕ ಸಿಐಡಿ ಡಿವೈಎಸ್ಪಿ ಅಂಜನ್ ಕುಮಾರ್ ನೇತೃತ್ವದ ತಂಡ ಮಾ.31 ರಂದು ಸಂಜೆ ಬೆಳ್ತಂಗಡಿ ತಾಲೂಕಿನ ನಾರಾವಿ ಐಬಿ ಗೆ ಆಗಮಿಸಿದ್ದಾರೆ.
ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ಅತ್ಯಾಚಾರ ಪ್ರಕರಣವನ್ನು ಏಪ್ರಿಲ್ 1 ರಿಂದ ಆರಂಭಿಸಲಿದ್ದಾರೆ.
