Home ಅಪರಾಧ ಲೋಕ ಬೆಳ್ತಂಗಡಿ: ಹೊಸಂಗಡಿಯಲ್ಲಿ ಮೈಮೇಲೆ ವಿದ್ಯುತ್ ಹರಿಸಿ ಕೇರಳ ಮೂಲದ ಟ್ಯಾಪಿಂಗ್ ಕಾರ್ಮಿಕ ಆತ್ಮಹತ್ಯೆ

ಬೆಳ್ತಂಗಡಿ: ಹೊಸಂಗಡಿಯಲ್ಲಿ ಮೈಮೇಲೆ ವಿದ್ಯುತ್ ಹರಿಸಿ ಕೇರಳ ಮೂಲದ ಟ್ಯಾಪಿಂಗ್ ಕಾರ್ಮಿಕ ಆತ್ಮಹತ್ಯೆ

0

ಬೆಳ್ತಂಗಡಿ; ಹೊಸಂಗಡಿ ಗ್ರಾಮದ ಪಾರ್ದೊಟ್ಟು ಎಂಬಲ್ಲಿ ಕೇರಳದಿಂದ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೋರ್ವ ಸ್ವತಹ ಮೈಮೇಲೆ ವಿದ್ಯುತ್ ಹರಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೃತ ವ್ಯಕ್ತಿ ಕೇರಳ ಮೂಲದ ಕಾರ್ಮಿಕ ಜೋಸೆಫ್ ತೋಮಸ್ (69) ಎಂಬಾತನಾಗಿದ್ದಾನೆ.
ಈತ ಹೊಸಂಗಡಿಯ ಶಾಜು.ಪಿ.ಟಿ ಎಂಬವರ ರಬ್ಬರ್ ತೋಟದಲ್ಲಿ ಕರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದು ಈತನ ಮೃತದೇಹ ಮಾ. 30ರಂದು ಸಂಜೆಯ ವೇಳೆ ಶಾಜು ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಕಂಡು ಬಂದಿದೆ.
ಮನೆಯ ಅಡುಗೆ ಕೋಣೆಯ ವಿದ್ಯುತ್ ಸ್ವಿಚ್ ಬೋರ್ಡ್ ಗೆ ಪ್ಲಗ್ ಸಿಕ್ಕಿಸಿ ಕಾಲಿಗೆ ವಯರ್ ಕನೆಕ್ಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡಂತೆ ಕಂಡು ಬಂದಿದ್ದು ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಜೋಸೆಫ್ ಎಂ.ಎಂ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ

NO COMMENTS

LEAVE A REPLY

Please enter your comment!
Please enter your name here

Exit mobile version