Home ಸ್ಥಳೀಯ ಸಮಾಚಾರ ಬೆಳ್ತಂಗಡಿ; ಸಂಭ್ರಮದಿಂದ ಗರಿಗಳ ಭಾನುವಾರ ಆಚರಿಸಿದ ಕ್ರೈಸ್ತ ಬಾಂಧವರು

ಬೆಳ್ತಂಗಡಿ; ಸಂಭ್ರಮದಿಂದ ಗರಿಗಳ ಭಾನುವಾರ ಆಚರಿಸಿದ ಕ್ರೈಸ್ತ ಬಾಂಧವರು

0

ಬೆಳ್ತಂಗಡಿ, ಮಾ. 29 : ಪ್ರಭು ಏಸು ಕ್ರಿಸ್ತರು ಜೆರುಸಲೇಂ ನಗರ ಪ್ರವೇಶದ ಸ್ಮರಣೆಯ ಗರಿಗಳ ಭಾನುವಾರವನ್ನು ಬೆಳ್ತಂಗಡಿ ತಾಲೂಕಿನ ಚರ್ಚ್‌ಗಳಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಬೆಳ್ತಂಗಡಿ ಸಂತ ಲಾರೆನ್ಸ್ ಪ್ರಧಾನ ದೇವಾಲಯದಲ್ಲಿ ಧರ್ಮಾಧ್ಯಕ್ಷರಾದ ಅ.ವಂ ಜೇಮ್ಸ್ ಪಟ್ಟೇರಿಲ್ ಅವರು ಗರಿಗಳ ಆಶೀರ್ವಾದ ನೆರವೇರಿಸಿ ದಿವ್ಯ ಬಲಿಪೂಜೆ ಅರ್ಪಿಸಿದರು. ಧರ್ಮಪ್ರಾಂತ್ಯದ ಚಾನ್ಸಲರ್ ಫಾ.ಲಾರೆನ್ಸ್ ಪೂನೂಲಿಲ್, ಫಾ. ಕುರಿಯಾಕೋಸ್ ವೆಟ್ಟುವಯಿ, ಫಾ ಥಾಮಸ್ ಸಹಕರಿಸಿದರು

ಬೆಳ್ತಂಗಡಿಯ ಪ್ರಮುಖ ಮೋಸ್ಟ್ ಹೋಲಿ ರಿಡೀಮರ್ ಚರ್ಚ್‌ನಲ್ಲಿ ಫಾದರ್ ವಾಲ್ಟರ್ ಡಿಮೇಲ್ಲೊ ಅವರ ನೇತೃತ್ವದಲ್ಲಿ ಬಲಿಪೂಜೆ ನೆರವೇರಿತು. ತಾಲೂಕಿನ ಉಜಿರೆ, ತೋಟತ್ತಾಡಿ,
ನಡ, ಗಂಡಿಬಾಗಿಲು, ಮಡಂತ್ಯಾರು, ಧರ್ಮಸ್ಥಳ, ಕಳೆಂಜ, ವೇಣೂರು ನಾರಾವಿ ಸೇರಿದಂತೆ ಎಲ್ಲ ಚರ್ಚ್‌ಗಳಲ್ಲಿ ಗರಿಗಳ ಭಾನುವಾರವನ್ನು ಕ್ರೈಸ್ತ ಬಾಂದವರು ಭಕ್ತಿಯಿಂದ ಆಚರಿಸಿದರು. ಚರ್ಚ್‌ಗಳಲ್ಲಿ ಗರಿಗಳನ್ನು ಪವಿತ್ರಗೊಳಿಸಿ ಬಳಿಕ ಅದನ್ನು ಭಕ್ತರಿಗೆ ಹಂಚಲಾಯಿತು. ಸ್ಥಳೀಯ ಚರ್ಚನ ಧರ್ಮ ಗುರುಗಳು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version