Home ಅಪಘಾತ ಬೆಳ್ತಂಗಡಿ : ಬೈಕ್ ಸ್ಕೀಡ್ ಆಗಿ ಡಿವೈಡರ್ ಗೆ ಡಿಕ್ಕಿಹೊಡೆದು ವಿದ್ಯಾರ್ಥಿ ಸಾವು: ಓರ್ವನಿಗೆ ಗಂಭೀರ...

ಬೆಳ್ತಂಗಡಿ : ಬೈಕ್ ಸ್ಕೀಡ್ ಆಗಿ ಡಿವೈಡರ್ ಗೆ ಡಿಕ್ಕಿಹೊಡೆದು ವಿದ್ಯಾರ್ಥಿ ಸಾವು: ಓರ್ವನಿಗೆ ಗಂಭೀರ ಗಾಯ

0

ಬೆಳ್ತಂಗಡಿ : ಬೈಕ್ ಸ್ಕೀಡ್ ಆಗಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮತ್ತು ಸಹಸವಾರ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಸಹಸವಾರ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಮೃತ ವಿದ್ಯಾರ್ಥಿ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಅಮ್ಮನಂಗಡಿ ನಿವಾಸಿ ಚಂದ್ರಶೇಖರ್ ಪುತ್ರ ನಿತೇಶ್(19) ಮೃತಪಟ್ಟವನು ಎಂದು ಗುರುತಿಸಲಾಗಿದೆ. ಬೈಕ್ ಸವಾರ ಪುತ್ತೂರು ನಿವಾಸಿ ಲಿಖಿತ್(20) ನಿವಾಸಿ ಗಂಭೀರ ಗಾಯಗೊಂಡು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಉಜಿರೆ -ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಾಲೇಜ್ ರಸ್ತೆಯಲ್ಲಿರುವ ಪಂಚಮಿ ಲಾಡ್ಜ್ ಮುಂಭಾಗದ ಡಿವೈಡರ್ ಗೆ ಮಾ.28 ರಂದು ರಾತ್ರಿ ಸುಮಾರು 12:30 ಗಂಟೆಗೆ ಕಾರ್ಯಕ್ರಮ ಮುಗಿಸಿ ವಾಪಸ್ ಬರುತ್ತಿದ್ದಾಗ ಕೆ.ಟಿ.ಎಮ್ ಕಂಪನಿಯ ಬೈಕ್ ಸ್ಕೀಡ್ ಆಗಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.
ಇಬ್ಬರು ಕೂಡ ಉಜಿರೆ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಾಗಿದ್ದಾರೆ.

ಉಜಿರೆ ಕಾಲೇಜ್ ರಸ್ತೆಯಲ್ಲಿ ಅಪಘಾತ ನಡೆದ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version