Home ಸ್ಥಳೀಯ ಸಮಾಚಾರ 31 ವರ್ಷಗಳ ವಿಶ್ವಾಸದ ಪಯಣ: ಸೋಜಾ ಎಲೆಕ್ಟ್ರಾನಿಕ್ಸ್‌ನಲ್ಲಿ ವಿಡಿಯಂ ಸರ್ವಿಸ್ ಕ್ಯಾಂಪ್‌ಗೆ ಚಾಲನೆ, ಸಮಾಜ ಸೇವೆಗೆ...

31 ವರ್ಷಗಳ ವಿಶ್ವಾಸದ ಪಯಣ: ಸೋಜಾ ಎಲೆಕ್ಟ್ರಾನಿಕ್ಸ್‌ನಲ್ಲಿ ವಿಡಿಯಂ ಸರ್ವಿಸ್ ಕ್ಯಾಂಪ್‌ಗೆ ಚಾಲನೆ, ಸಮಾಜ ಸೇವೆಗೆ ಆಧ್ಯತೆ ಶ್ಲಾಘನೀಯ: ಡಿವೈಎಸ್ಪಿ ರೋಹಿಣಿ ಸಿ.ಕೆ

0

ಬೆಳ್ತಂಗಡಿ: ಕಳೆದ 31 ವರ್ಷಗಳಿಂದ ಗುಣಮಟ್ಟದ ಉತ್ಪನ್ನಗಳು ಮತ್ತು ಅತ್ಯುತ್ತಮ ಗ್ರಾಹಕ ಸೇವೆಯ ಮೂಲಕ ಬೆಳ್ತಂಗಡಿ ಭಾಗದ ಜನರ ವಿಶ್ವಾಸ ಗಳಿಸಿರುವ ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಯಲ್ಲಿ ವಿಡಿಯಂ ಕಂಪನಿಯ ವಿಶೇಷ ಸರ್ವಿಸ್ ಕ್ಯಾಂಪ್‌ಗೆ ಜು 29ರಂದು ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಸ್ಪಿ ರೋಹಿಣಿ ಸಿ.ಕೆ ಅವರು ಬೆಳ್ತಂಗಡಿಯ ಜನರು ಎಲ್ಲರೂ ಒಗ್ಗಟ್ಟಿನಿಂದ ಊರಿನ ಅಭಿವೃದ್ಧಿ ಹಾಗೂ ಸಮಾಜ ಸೇವೆಗೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಬೆಳವಣಿಗೆ.ಸಮಾಜಮುಖಿ ಚಿಂತನೆಯೊಂದಿಗೆ ಸಾಗುತ್ತಿರುವ ಸೋಜಾ ಸಂಸ್ಥೆಯ ಸೇವೆ ಇತರರಿಗೆ ಮಾದರಿಯಾಗಿದೆ ಎಂದರು.

ರೂರಲ್ ಡೆವಲಪ್ಮೆಂಟ್ ಸೊಸೈಟಿಯ ನಿರ್ದೇಶಕರಾದ ಫಾ. ಆದರ್ಶ್ ಜೋಸೇಫ್ ಮಾತನಾಡಿ ವಿಡಿಯಂ ಕಂಪನಿಯ ಸರ್ವಿಸ್ ಕ್ಯಾಂಪ್‌ನ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.

ವಿಡಿಯಂ ಕಂಪನಿಯ ಪ್ರತಿನಿಧಿ ಲಿಖಿತ್ ಮಾತನಾಡಿ 2015ರಲ್ಲಿ ಆರಂಭವಾದ ವಿಡಿಯಂ ಕಂಪನಿ ಗುಣಮಟ್ಟದ ಸೇವೆಗೆ ಆದ್ಯತೆ ನೀಡುತ್ತಿದ್ದು, ಆರಂಭದಿಂದಲೂ ಸೋಜಾ ಎಲೆಕ್ಟ್ರಾನಿಕ್ಸ್ ನೀಡಿರುವ ಸಹಕಾರ ನಮ್ಮ ಬೆಳವಣಿಗೆಗೆ ಬಲವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಾಜ್ ಶೇಖರ್, ಪತ್ರಕರ್ತರಾದ ಅಶ್ರಫ್ ಆಲಿಕುಂಜಿ, ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯೆ ಮಿಶ್ರಿಯಾ, ಟೆಕ್ನಿಷಿಯನ್ ನಾಗೇಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಸಂಸ್ಥೆಯ ವ್ಯವಸ್ಥಾಪಕ ಲ್ಯಾನ್ಸಿ ಡಿಸೋಜಾ ಹಾಗೂ ಸಿಬ್ಬಂದಿಗಳಾದ ಪವಿತ್ರ, ಶಶಿಕಲಾ, ಯಶೋಧ, ಭರತ್, ಸುಮಲತಾ, ನಿಮ್ಮಿ, ಥೋಮಸ್, ರಶ್ಮಿತಾ, ಪ್ರಮೀಳಾ ಶೆಟ್ಟಿ, ಲಿಖಿತಾ ಶೆಟ್ಟಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸೋಜಾ ಸಂಸ್ಥೆಯ ಮಾಲಕ ಅಲ್ಫೋನ್ಸಾ ಫ್ರಾಂಕೋ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸಿಬ್ಬಂದಿಯಿಂದ ಪ್ರಾರ್ಥನೆ ನೆರವೇರಿತು.

ಶೀಘ್ರದಲ್ಲೇ ಹೊಸ ಮಳಿಗೆ ಪ್ರಾರಂಭ – ಅಲ್ಫೋನ್ಸಾ ಫ್ರಾಂಕೋ

1995ರಲ್ಲಿ ಸೋಜಾ ಎಲೆಕ್ಟ್ರಾನಿಕ್ಸ್ ಆರಂಭಿಸಿದಾಗ ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ಗ್ರಾಹಕರ ವಿಶ್ವಾಸ, ದೇವರ ಆಶೀರ್ವಾದ ಮತ್ತು ಸಿಬ್ಬಂದಿಯ ಸಹಕಾರದಿಂದ ಇಂದು 31 ವರ್ಷಗಳ ಯಶಸ್ವಿ ಪಯಣವನ್ನು ಪೂರೈಸಿದ್ದೇವೆ. ವ್ಯಾಪಾರ ಮಾತ್ರವಲ್ಲ, ಸಮಾಜಮುಖಿ ಸೇವೆಯನ್ನೂ ನಮ್ಮ ಧ್ಯೇಯವಾಗಿಸಿಕೊಂಡಿದ್ದೇವೆ. ಸಮಯದ ಮೌಲ್ಯ ಅರಿತು ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ನಮ್ಮ ಮೊದಲ ಆದ್ಯತೆ. ಇದೇ ವಿಶ್ವಾಸದೊಂದಿಗೆ ಶೀಘ್ರದಲ್ಲೇ ಮತ್ತೊಂದು ಹೊಸ ಮಳಿಗೆಯನ್ನು ಆರಂಭಿಸಲಿದ್ದೇವೆ ಎಂದು ಸಂಸ್ಥೆಯ ಮಾಲಕ ಅಲ್ಫೋನ್ಸಾ ಫ್ರಾಂಕೋ ತಿಳಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version