Home ಅಪಘಾತ ಭಾರೀ ಗಾಳಿ ಮಳೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಹಲವಾರು ಮನೆಗಳಿಗೆ ವ್ಯಾಪಕ ಹಾನಿ

ಭಾರೀ ಗಾಳಿ ಮಳೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಹಲವಾರು ಮನೆಗಳಿಗೆ ವ್ಯಾಪಕ ಹಾನಿ

0

ಬೆಳ್ತಂಗಡಿ; ಶನಿವಾರ ಅಪರಾಹ್ನ ಸುರಿದ ಭಾರೀ ಗಾಳಿಯೊಂದಿಗೆ ಮಳೆ ಸುರಿದಿದೆ.
ತೆಂಕಕಾರಂದೂರು ಗ್ರಾಮದ ಪೆರೊಡಿತ್ತಾಯನ ಕಟ್ಟೆ ಪರಿಸರದಲ್ಲಿ ಭಾರಿ ಗಾಳಿ ಬೀಸಿದ್ದು 20ಕ್ಕಿಂತ ಅಧಿಕ ಮನೆಗಳಿಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ. ಇಲ್ಲಿನ ನಿವಾಸಿ ಮಹಮ್ಮದ್ ಕುಂಞಿ ಎಂಬವರ ಮನೆ ಮೇಲೆ ಮರ ಬಿದ್ದು ಸಂಪೂರ್ಣ ಮೇಲ್ಚಾವಣಿಯ ಶೀಟ್ ಗಳು ಪುಡಿಪುಡಿಯಾಗಿದೆ
ಕಮಲ ಮೇರ ಹಾಗೂ ಚಂದ್ರ ಮೇರ ಎಂಬವರ ಮನೆಯ ಮೇಲೂ ಮರಗಳು ಬಿದ್ದು ಹಾನಿ ಸಂಭವಿಸಿದೆ
ಇಲ್ಲಿನ ನಿವಾಸಿಗಳಾದ ಅಬೂಬಕ್ಕರ್, ರಫೀಕ್, ದಿನೇಶ್ ಕುಲಾಲ್, ರತ್ನ, ಜುಬೈದಾ, ಗೌರಿ ಹಾಗೂ ಇತರ ಕೆಲವರ ಮನೆಗಳಿಗೂ ಹಾನಿ ಸಂಭವಿಸಿದೆ. ಇಲ್ಲಿ ಹಲವರ ತೋಟಗಳಲ್ಲಿ ಅಡಿಕೆ ಮರಗಳು ಮುರಿದು ಬಿದ್ದಿದೆ ಹಲವೆಡೆ ಮರಗಳು ಉರುಳಿ ಬಿದ್ದಿದ್ದು ವ್ಯಾಪಕ ಹಾನಿ ಸಂಭವಿಸಿರುವುದಾಗಿ ತಿಳಿದು ಬಂದಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.


ನೆರಿಯ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ನ ನಿವಾಸಿ ಜೋಯ್ ಎಂಬವರ ಮನೆಯ ಶೀಟುಗಳು ಗಳಿಗೆ ಹಾರಿಹೋಗಿವೆ. ಪಟ್ರಮೆ ಗ್ರಾಮದ ಲಲಿತಾ ಎಂಬವರ ಮನೆಗೂ ತೀವ್ರ ಹಾನಿ ಸಂಭವಿಸಿದೆ. ಕಳೆಂಜ ಗ್ರಾಮದ ಪಾದೆ ನಿವಾಸಿ ರುಕ್ಮಿಣಿ ಎಂಬವರ ಮನೆಗೆ ಹಾಗೂ ಕೊಕ್ಕಡ ನಿವಾಸಿ ಕಾಂತಪ್ಪ ಗೌಡ ಎಂಬವರ ಮನೆಗೂ ಹಾನಿ ಸಂಭವಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version