Home ಅಪರಾಧ ಲೋಕ ಬೆಳ್ತಂಗಡಿ : ಬೆಳಾಲು ಕೃಷಿ ಪತ್ತಿನ ಸಂಘದಲ್ಲಿ ಅವ್ಯವಹಾರ ಪ್ರಕರಣ; ಎರಡನೇ ಆರೋಪಿ ಪ್ರಶಾಂತ್ ಬಂಧನ

ಬೆಳ್ತಂಗಡಿ : ಬೆಳಾಲು ಕೃಷಿ ಪತ್ತಿನ ಸಂಘದಲ್ಲಿ ಅವ್ಯವಹಾರ ಪ್ರಕರಣ; ಎರಡನೇ ಆರೋಪಿ ಪ್ರಶಾಂತ್ ಬಂಧನ

3
0

ಬೆಳ್ತಂಗಡಿ: ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೊರ್ವ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬ್ಯಾಂಕಿನ ಮಾಜಿ ಸಿಬ್ಬಂದಿ ಪ್ರಶಾಂತ್(36) ಬಂಧಿತ ಎರಡನೇ ಆರೋಪಿಯಾಗಿದ್ದಾರೆ. 2025ರ ಮೇ. 31 ರಂದು ಪ್ರಕರಣ ದಾಖಲಾಗಿತ್ತು. ತಲೆ ಮರೆಸಿಕೊಂಡಿದ್ದ ಈತನನ್ನು ಧರ್ಮಸ್ಥಳ ಸಬ್ ಇನ್ಸೆಕ್ಟರ್ ಸಮರ್ಥ್ ಆರ್ ಗಾಣಿಗೇರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಮಾ.25 ರಂದು ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬೈಪಾಡಿನಲ್ಲಿ ಸುಮಾರು 2 ಗಂಟೆ ವೇಳೆಗೆ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಾ.25 ರಂದು ಸಂಜೆ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here