Home ಅಪಘಾತ ತಣ್ಣೀರುಪಂತ; ಏಳನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ತಣ್ಣೀರುಪಂತ; ಏಳನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

33
0

ಬೆಳ್ತಂಗಡಿ; 7ನೇ ತರಗತಿ ಓದುತ್ತಿರುವ ವಿಧ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಫೆಬ್ರವರಿ 18 ರಂದು ತಾಲೂಕಿನ ತಣ್ಣೀರು ಪಂಥ ಗ್ರಾಮದಲ್ಲಿ ನಡೆದಿದೆ.

ತಣ್ಣೀರುಪಂತ ನಿವಾಸಿ ಡೊಂಬಯ್ಯ ಗೌಡ ಎಂಬವರ ಪುತ್ರ ಶ್ರವಣ್ (13) ಮೃತ ವಿದ್ಯಾರ್ಥಿ.ಈತ ಉಪ್ಪಿನಂಗಡಿಯ ಖಾಸಗಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಫೆಬ್ರವರಿ 18ರಂದು ರಾತ್ರಿ ಮಲಗುವ ಕೋಣೆಯಲ್ಲಿ ಒಳಗಿನಿಂದ ಚಿಲಕ ಹಾಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆಯವರು ಇದನ್ನು ಗಮನಿಸಿದ್ದು ಕೊಠಡಿಯ ಬಾಗಿಲನ್ನು ಒಡೆದು ಬಾಲಕನನ್ನು ನೇಣಿನಿಂದ ಕೆಳಗಿಳಿಸಿ ಆಸ್ಪತ್ರಗೆ ಕೊಂಡೊಯ್ದರೂ ಆವೇಳೆಗೆ ಆತ ಮೃತಪಟ್ಟಿದ್ದ. ಘಟನೆಯ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here