Home ಅಪಘಾತ ಬೆಳ್ತಂಗಡಿ : ಚಾರ್ಮಾಡಿ ಘಾಟ್ ನಲ್ಲಿ ಟಿಟಿ ವಾಹನ ಪಲ್ಟಿ ಓರ್ವ ಸಾವು 9ಮಂದಿಗೆ ಗಾಯ

ಬೆಳ್ತಂಗಡಿ : ಚಾರ್ಮಾಡಿ ಘಾಟ್ ನಲ್ಲಿ ಟಿಟಿ ವಾಹನ ಪಲ್ಟಿ ಓರ್ವ ಸಾವು 9ಮಂದಿಗೆ ಗಾಯ

0

ಬೆಳ್ತಂಗಡಿ : ಬ್ರೇಕ್ ಫೈಲ್ ಆಗಿ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿಯಾಗಿ ಒಂಬತ್ತು ಮಂದಿ ಗಂಭೀರ ಗಾಯವಾಗಿದ್ದು. ಓರ್ವ ವೃದ್ಧ ಸಾವನ್ನಪ್ಪಿದ್ದಾರೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ನ ಒಂಬತ್ತನೇ ತಿರುವಿನಲ್ಲಿ ಬ್ರೇಕ್ ಫೈಲ್ ಆಗಿ ಟಿಟಿ ವಾಹನ ಪಲ್ಟಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮೇಲನಹಳ್ಳಿಯಿಂದ 10 ಮಂದಿ ಸೇರಿದಂತೆ ಮೂವರು ಮಕ್ಕಳು ಟಿಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಮಾ.21 ರಂದು ಬೆಳಗ್ಗೆ ಘಟನೆ ನಡೆದಿದೆ.

ಟಿಟಿ ವಾಹನಲ್ಲಿ ಒಂದೇ ಕುಟುಂಬದ 13 ಮಂದಿಯಲ್ಲಿ 9 ಮಂದಿಗೆ ಗಂಭೀರ ಗಾಯವಾಗಿದ್ದು. ಮಲೇನಹಳ್ಳಿ ನಿವಾಸಿ ಶೇಖರಪ್ಪ (59) ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕಿಶೋರ್ ಪಿ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version