Home ಅಪಘಾತ ವೇಣೂರು: ಆಟೋರಿಕ್ಷಾ-ಬೈಕ್ ಅಪಘಾತ-ಬೈಕ್ ಸವಾರ ಸಾವು

ವೇಣೂರು: ಆಟೋರಿಕ್ಷಾ-ಬೈಕ್ ಅಪಘಾತ-ಬೈಕ್ ಸವಾರ ಸಾವು

0

ವೇಣೂರು: ವೇಣೂರು ಸಮೀಪದ ಮೂಡುಕೋಡಿ ಪಂಜಲಬೈಲು ಎಂಬಲ್ಲಿ ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭಿಸಿದ್ದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ನ.೩ರಂದು ಸಂಜೆ ನಡೆದಿದೆ. ಬೈಕ್ ಸವಾರ ವೇಣೂರಿನಲ್ಲಿ ಚಿನ್ನದ ಮಳಿಗೆಯ ಶಾಖಾ ವ್ಯವಸ್ಥಾಪಕನಾಗಿ ಉದ್ಯೋಗದಲ್ಲಿದ್ದ ಪೆರಾಡಿ ಗ್ರಾಮದ ಅಲೆಕ್ಕಿ ದಿ.ಕೊರಗಪ್ಪ ಕುಲಾಲ್ ಅವರು ಪುತ್ರ ಸ್ವಸ್ತಿಕ್(೨೬) ಮೃತ ರ್ದುದೈವಿ. ಇವರು ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆ ಕರೆದೊಯ್ಯದ್ದರು ದಾರಿ ಮಧ್ಯೆ ಅವರು ಕೊನೆ ಉಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಸ್ವಸ್ತಿಕ್ ಮನೆಯ ಆಧಾರಸ್ತಂಭವಾಗಿದ್ದು ತಾಯಿ ಹಾಗೂ ಇಬ್ಬರು ಸಹೋದರಿಯನ್ನು ಅಗಲಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version