Home ಸ್ಥಳೀಯ ಸಮಾಚಾರ ಇತಿಹಾಸ ಪ್ರಸಿದ್ದ ವೇಣೂರು ಪೆರ್ಮುಡ ಸೂರ್ಯ- ಚಂದ್ರ ಜೋಡುಕರೆ ಕಂಬಳಕ್ಕೆ ಚಾಲನೆ

ಇತಿಹಾಸ ಪ್ರಸಿದ್ದ ವೇಣೂರು ಪೆರ್ಮುಡ ಸೂರ್ಯ- ಚಂದ್ರ ಜೋಡುಕರೆ ಕಂಬಳಕ್ಕೆ ಚಾಲನೆ

0

ವೇಣೂರು: ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳವು ಸೀಮೆಯ ಏಕೈಕ ಪ್ರತಿಷ್ಠಿತ ಕಂಬಳ ಆಗಿದೆ. ತೀರಾ ವ್ಯವಸ್ಥಿತ ರೀತಿಯಲ್ಲಿ ವಸಂತ ಬಂಗೇರರ ಗೌರವಾಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಕಂಬಳವನ್ನು ಮುನ್ನಡೆಸುವ ಬಗ್ಗೆ ನಮಗೆ ಭಯ ಕಾಡಿತ್ತು. ಆದರೆ ಇದೀಗ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಬಹಳಷ್ಟು ಅಚ್ಚುಕಟ್ಟಾಗಿ ಕಂಬಳವನ್ನು ಏರ್ಪಡಲಾಗಿದ್ದು, ಗಣಪತಿ ಸ್ತುತಿಯೊಂದಿಗೆ ಆರಂಭವಾದ ಈ ಗ್ರಾಮೀಣ ಕ್ರೀಡೆ ಯಾವುದೇ ವಿಘ್ನ ಬರದೆ ಸಾಂಗವಾಗಿ ನೆರವೇರಲಿ ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಹೇಳಿದರು.

ಇತಿಹಾಸ ಪ್ರಸಿದ್ದ ಹೊನಲು ಬೆಳಕಿನ 33ನೇ ವರ್ಷದ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಅವರ ಗೌರವಾಧ್ಯಕ್ಷತೆಯಲ್ಲಿ ನಡೆಯುತ್ತಿರುವ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ ಕ್ರೀಡೆಗೆ ಚಾಲನೆ ನೀಡಿ ಅವರು ಆಶೀರ್ವದಿಸಿದರು. ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರುಗಳಾದ ಫಾ. ಎಡ್ರಿನ್ ಸಂತೋಷ್ ಮೊರಾಸ್, ನಿವೃತ್ತ ಎಸ್.ಪಿ. ಪೀತಾಂಬರ ಹೇರಾಜೆ, ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಸಿಯಸ್ ಎಸ್. ಲೋಬೋ, ಪೆರಾಡಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಟ, ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲ ಮನೋಹರ ಕುಮಾರ್, ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆ ಅವರು ಮಾತನಾಡಿ ಶುಭ ಹಾರೈಸಿದರು. ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್‌. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಇತಿಹಾಸ ಸುರೇಶ್ ಕುಮಾ‌ರ್ ಆರಿಗ ಪೆರ್ಮಾಣುಗುತ್ತು, ವಂದನಾ ಭಂಡಾರಿ, ದಿನೇಶ್ ಮೂಲ್ಯ, ವಿಮಲಚಂದ್ರ ಕೋಟ್ಯಾನ್, ಗುರುರಾಜ್ ಗುರಿಪಳ್ಳ, ಪ್ರಕಾಶ್ ಕೋಟ್ಯಾನ್ ನಾರಾವಿ, ಹಿರಿಯ ನ್ಯಾಯವಾದಿ ಅಜಿತ್ ಎನ್., ಬೆಳ್ತಂಗಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ವಲಯ/ಅರಣ್ಯಾಧಿಕಾರಿ ಭರತ್ ಯು.ಜಿ., ಪಡಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ, ಮನೋಜ್ ಕೋಟ್ಯಾನ್ ಕಾಶಿಪಟ್ಟ, ಪದ್ಮನಾಭ ಸಾಲ್ಯಾನ್ ಮಾಲಾಡಿ, ಕೇಶವ ಕೋರ್ಡೇಲು, ಗುಣವತಿ ಡಿ. ಕುಕ್ಕೇಡಿ, ತೇಜಾಕ್ಷಿ ಕುಕ್ಕೇಡಿ, ವಿನೋದಾ, ಹರಿಣಾಕ್ಷಿ, ಕಕ್ಕೆಪದವು ಕಂಬಳ ಸಮಿತಿ ಸಂಚಾಲಕ ರಂಜಿತ್ ಮೈರ, ಸತೀಶ್ ಹೆಗ್ಡೆ ಬಜಿರೆ, ಕಂಬಳ ಸಮಿತಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ, ಸಂಚಾಲಕ ಪ್ರವೀಣ್‌ ಫೆರ್ನಾಂಡಿಸ್‌ ಹಳ್ಳಿಮನೆ ಉಜಿರೆ, ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ, ಕೋಶಾಧಿಕಾರಿ ಅಶೋಕ್ ಪಾಣೂರು, ಕಾರ್ಯದರ್ಶಿ ಭರತ್‌ರಾಜ್ ಪಾಪುದಡ್ಕಗುತ್ತು, ಉಪಾಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಕೋಟ್ಯಾನ್ ಸ್ವಾಗತಿಸಿ, ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರ್ವಹಿಸಿದರು. ಕಂಬಳ ಸಮಿತಿ ಕಾಯಾಧ್ಯಕ್ಷ ಶೇಖರ ಕುಕ್ಕೇಡಿ ವಂದಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version