ಬೆಳ್ತಂಗಡಿ: ಸಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಹಾಕಿದ ಪ್ರಕರಣದಲ್ಲಿ ಪೊಲೀಸರಿಂದ ಬಂಧಿತಳಾಗಿದ್ದ ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಯುವತಿಗೆ ಮದ್ಯಂತರ ಜಾಮೀನು ಲಭಿಸಿದ್ದು ಆಕೆ ಬಿಡುಗಡೆಯಾಗಿದ್ದಾಳೆ ಜಾಮೀನು ಪಡೆದ ಬಳಿಕ ಆಕೆಯೊಂದಿಗಿನ ಫೊಟೋ ಹಂಚಿಕೊಂಡಿರುವ ಶಾಸಕ ಹರೀಶ್ ಪೂಂಜ ಕಾಂಗ್ರೆಸ್ ಸರಕಾರದ ತುಷ್ಟೀಕರಣ ರಾಜಕೀಯದ ವಿರುದ್ದ ಗೆಲುವು ಲಭಿಸಿದೆ ಎಂದು ಬರೆದಿದ್ದಾರೆ
ಶಾಸಕರ ಫೇಸ್ ಬುಕ್ ಪೋಸ್ಟ್ ನಲ್ಲಿ ಏನಿದೆ ನೋಡಿ
“ಭಯೋತ್ಪಾದನಾ ವಿರೋಧಿ ಹಿಂದೂ ಪರವಾದ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಚಾರವಾಗಿ ಕಾಂಗ್ರೆಸ್ ಸರಕಾರ ನಮ್ಮ ಬೆಳ್ತಂಗಡಿಯ ಕರಂಬಾರು ಗ್ರಾಮದ ವಿದ್ಯಾ ಎನ್ನುವ ದಲಿತ ಹೆಣ್ಣು ಮಗಳೊಬ್ಬಳನ್ನು ಏಕಾಏಕಿ ಬಂಧಿಸಿ ತನ್ನ ತುಷ್ಟಿಕರಣ ರಾಜಕೀಯದ ಕರಾಳ ಮುಖದ ಅನಾವರಣ ನಡೆಸಿತ್ತು.
ಆದರೆ ಈ ನೆಲದ ಕಾನೂನು ಕಾಂಗ್ರೆಸ್ ಸರ್ಕಾರದ ನೀಚ ರಾಜಕೀಯಕ್ಕೆ ಎಡೆ ಮಾಡಿಕೊಡಲಿಲ್ಲ ಮಧ್ಯರಾತ್ರಿ ಒಂದು ಗಂಟೆಗೆ ಮಾನ್ಯ ನ್ಯಾಯಾಧೀಶರು ಪ್ರಕರಣದ ವಾಸ್ತವತೆಯನ್ನು ಅರಿತು ಹೆಣ್ಣು ಮಗಳಿಗೆ ಮಧ್ಯಂತರ ಜಾಮೀನು ನೀಡಿ ಕಾನೂನಿನ ರಕ್ಷಣೆಯನ್ನು ನೀಡಿದ್ದಾರೆ. ಈ ಮೂಲಕ ಈ ನೆಲದ ಕಾನೂನಿನ ಮೇಲಿನ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಕಾನೂನು ಹೋರಾಟದಲ್ಲಿ ಸಹಕರಿಸಿದ ವಕೀಲ ಮಿತ್ರರಾದ ಅಜಯ್ ಸುವರ್ಣ ಹಾಗೂ ಸಂತೋಷ್ ಶೆಟ್ಟಿ ಅವರಿಗೆ ಧನ್ಯವಾದಗಳು..
ದಲಿತರನ್ನು ಟಾರ್ಗೆಟ್ ಮಾಡಿ ಬಂದಿಸುವ ಬೆಳ್ತಂಗಡಿ ನೀಚ ಕಾಂಗ್ರೆಸ್ ನಾಯಕರು” ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ










