Home ಸ್ಥಳೀಯ ಸಮಾಚಾರ ಮಲೆಯಡ್ಕ ಮುಗೆರೋಡಿ ಕನ್ ಸ್ಟ್ರಕ್ಷನ್ ನ ಮಿಕ್ಸಿಂಗ್ ಪ್ಲಾಂಟ್ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದಿಂದ ನೋಟೀಸ್

ಮಲೆಯಡ್ಕ ಮುಗೆರೋಡಿ ಕನ್ ಸ್ಟ್ರಕ್ಷನ್ ನ ಮಿಕ್ಸಿಂಗ್ ಪ್ಲಾಂಟ್ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದಿಂದ ನೋಟೀಸ್

4
0

ಬೆಳ್ತಂಗಡಿ; ನಡ ಗ್ರಾಮಪಂಚಾಯತು ವ್ಯಾಪ್ತಿಯ ಕನ್ಯಾಡಿ ಗ್ರಾಮದ ಮಲೆಯಡ್ಕ ಎಂಬಲ್ಲಿ ಅಕ್ರಮವಾಗಿ ನಿಯಮಗಳನ್ನು ಪಾಲಿಸದೆ   ಮುಗ್ರೋಡಿ ಕನ್ ಸ್ಟ್ರಕ್ಷನ್ ನಡೆಸಿದ ಎನ್ನಲಾದ ದೌರ್ಜನ್ಯಗಳ ಕುರಿತಾಗಿ ಇದೀಗ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಸಂಬಂಧಿಸಿದವರಿಗೆ ನೋಟೀಸ್ ಜಾರಿ ಮಾಡಿದೆ. 

ಇದೀಗ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ಪ್ರಕರಣದಲ್ಲಿ ಮದ್ಯಪ್ರವೇಶಿಸಿ ಜಿಲ್ಲಾಧಿಕಾರಿ ಮತ್ತು ಅರಣ್ಯ ಆಯುಕ್ತರಿಗೆ ನೋಟೀಸ್ ಜಾರಿಗೊಳಿಸಿದ್ದು ಪ್ರಕರಣದ ಕುರಿತಾದ ವಿಸ್ಕೃತ ವರದಿ ಕೇಳಿದೆ. ಆಯೋಗವು ಭಾರತೀಯ ಸಂವಿಧಾನದ ಕಲಂ 338A ಅಡಿಯಲ್ಲಿ ನೀಡಿರುವ ಅಧಿಕಾರದಂತೆ ಈ ವಿಷಯವನ್ನು ವಿಚಾರಿಸಲು ನಿರ್ಧರಿಸಿದ್ದು

ಈ ಸಂಬಂಧ ಸಾರ್ವಜನಿಕರು, ಪರಿಶಿಷ್ಟ ಪಂಗಡ ನಿವಾಸಿಗಳು ನೀಡಿರುವ ದೂರಿನನ್ವಯ  ಕೈಗೊಂಡಿರುವ ಕ್ರಮಗಳ ಸಂಪೂರ್ಣ ವಿವರಗಳನ್ನು  ಸಲ್ಲಿಸುವಂತೆ ನಿರ್ದೇಶಿಸಿದೆ. ನೋಟಿಸ್ ಸ್ವೀಕರಿಸಿದ ದಿನಾಂಕದಿಂದ 15 ದಿನಗಳೊಳಗೆ ವರದಿ  ಸಲ್ಲಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ.

ನಿಗದಿತ ಅವಧಿಯಲ್ಲಿ ಉತ್ತರ ಸಿಗದಿದ್ದಲ್ಲಿ, ಭಾರತೀಯ ಸಂವಿಧಾನದ ಕಲಂ 338A ಉಪಖಂಡ (8) ಅಡಿಯಲ್ಲಿ ನಾಗರಿಕ ನ್ಯಾಯಾಲಯಕ್ಕೆ ನೀಡಿರುವ ಅಧಿಕಾರಗಳನ್ನು ಬಳಸಿ ಸಮನ್ಸ್ ನೀಡುವ ಎಚ್ಚರಿಕೆಯನ್ನೂ ಆಯೋಗ  ನೀಡಿದೆ.

  ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ನಿರ್ದೇಶಕ ಡಾ. ಪಿ ಕಲ್ಯಾಣರೆಡ್ಡಿ ವರದಿ ಕೇಳಿ ನೋಟೀಸ್ ಜಾರಿಗೊಳಿಸಿದ್ದಾರೆ

  2008 ರಿಂದ ಪ್ರಾರಂಭಗೊಂಡ ಹಾಟ್ ಮಿಕ್ಸಿಂಗ್ ಮತ್ತು ಕಾಂಕ್ರೀಟ್ ಮಿಕ್ಸಿಂಗ್ ನಲ್ಲಿ ನಿರತವಾಗಿದ್ದ ಮುಗ್ರೋಡಿ ಕನ್ಸ್ ಸ್ಟ್ರಕ್ಷನ್ ಕಳೆದ ಕೆಲವರ್ಷದಿಂದ ಸೂಕ್ತ ಚಿಮಿಣಿ ಅಳವಡಿಸದೆ, ಡಸ್ಟ್ ನಿಯಂತ್ರಿಸದೆ ಅಹೋರಾತ್ರಿ ಹಾಟ್ ಮಿಕ್ಸಿಂಗ್ ನಲ್ಲಿ ತೊಡಗಿತ್ತು. ಇದರಿಂದ ಬಿಡುಗಡೆಗೊಂಡ ರಾಸಾಯನಿಕ ಕಲ್ಮಷಗಳು ಈ ಪ್ರದೇಶಗಳ   ನಿವಾಸಿಗಳಿಗೆ ಆರೋಗ್ಯದ ಸಮಸ್ಯೆಗಳನ್ನು ಉಂಟು ಮಾಡಿದ್ದವು‌.

ಈ ಹಿನ್ನಲೆಯಲ್ಲಿ ಹೋರಾಟಕ್ಕಿಳಿದ ಮಲೆಯಡ್ಕ, ಉಜಿರೆ ನಿವಾಸಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ವೈದ್ಯಕೀಯ ವರದಿ, ಜಿಪಿಎಸ್ ಫೋಟೋ, ಜನಪ್ರತಿನಿಧಿಗಳ ಬಳಿ ಅಹವಾಲು ಮತ್ತು ಸರಕಾರದ ನಾನಾ ಇಲಾಖೆಗಳಿಗೆ ಮನವಿಯನ್ನು ಸಲ್ಲಿಸಲಾಗಿತ್ತು

 ಕರ್ನಾಟಕ ಉಚ್ಚನ್ಯಾಯಾಲಯ ಪ್ರಕರಣ ಆಲಿಸಿ ಜಿಲ್ಲಾಧಿಕಾರಿ, ನಡ ಪಂಚಾಯತ್ ಪಿಡಿಓ, ಮಾಲಿನ್ಯನಿಯಂತ್ರಣ ಮಂಡಳಿ, ತಹಶೀಲ್ದಾರ್ ಬೆಳ್ತಂಗಡಿ, ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ, ಮತ್ತು ಮುಗ್ರೋಡಿ ಕನ್ಸ್ ಸ್ರಕ್ಷನ್ ಸಂಸ್ಥೆ ಮೊದಲಾದವರಿಗೆ ನೋಟೀಸ್ ಜಾರಿ ಮಾಡಿತ್ತು. ನೋಟೀಸ್ ನಂತರವೂ ನಿಯಮಾವಳಿಗಳ ಉಲ್ಲಂಘನೆ ಮುಂದುವರೆದಿತ್ತು. ಈ ಹಿನ್ನಲೆಯಲ್ಲಿ ಸ್ಥಳೀಯ ಜನರು ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗಕ್ಕೆ ದೂರು ಸಲ್ಲಿಸಿದ್ದರು.

 

LEAVE A REPLY

Please enter your comment!
Please enter your name here