Home ರಾಜಕೀಯ ಸಮಾಚಾರ ಕಣಿಯೂರು ಬಿ ಜೆ ಪಿ ಬೂತ್ ಸಮಿತಿ ಅಧ್ಯಕ್ಷ ಕಾಂಗ್ರೇಸ್ ಸೇರ್ಪಡೆ

ಕಣಿಯೂರು ಬಿ ಜೆ ಪಿ ಬೂತ್ ಸಮಿತಿ ಅಧ್ಯಕ್ಷ ಕಾಂಗ್ರೇಸ್ ಸೇರ್ಪಡೆ

1347
0

ಬೆಳ್ತಂಗಡಿ; ಕಲ್ಲೇರಿಯಲ್ಲಿ ನಡೆದ ಕಾಂಗ್ರೇಸ್ ಪಕ್ಷದ ಪ್ರಚಾರ ಸಭೆಯಲ್ಲಿ ಕಣಿಯೂರು ಬೂತ್ ಸಂಖ್ಯೆ 203 ರ ಅಧ್ಯಕ್ಷ ನವೀನ್ ಪೂಜಾರಿ ಮತ್ತು ಪದಾಧಿಕಾರಿಗಳಾದ ಸುದೇಶ್ ಪೂಜಾರಿ, ಮೋಹನ ಗೌಡ, ಸುನಿಲ್ ಪೂಜಾರಿ, ಸನತ್, ನಿತಿನ್, ಪ್ರಕಾಶ್, ಹರ್ಷಿತ್ ಪೂಜಾರಿ, ಪ್ರಶಾಂತ್ ಪೂಜಾರಿ ಮತ್ತು ಸುರೇಶ್ ರವರುಗಳು ಬಿಜೆಪಿ ತೊರೆದು ಕಾಂಗ್ರೇಸ್ ಪಕ್ಷವನ್ನು ಸೇರಿದರು.

ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಪಕ್ಷದ ದ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ, ಕಾಂಗ್ರೇಸ್ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ, ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಸತೀಶ್ ಬಂಗೇರ, ಕಾಶಿಪಟ್ಟಣ, ನಾಗೇಶ್ ಕುಮಾರ್ ಗೌಡ, ಕೆ ಕೆ ಶಾಹುಲ್ ಹಮೀದ್, ಧರನೇಂದ್ರ ಕುಮಾರ್, ಲೋಕೇಶ್ವರಿ ವಿನಯಚಂದ್ರ, ಉಮಾವತಿ ದೇಜಪ್ಪ ಗೌಡ, ಉಷಾ ಶರತ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here