Home ಅಪರಾಧ ಲೋಕ ಕಳಿಯ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಕೆರೆಯಲ್ಲಿ ಪತ್ತೆ, ಸಾವಿನ ಬಗ್ಗೆ ಹಲವು ಅನುಮಾನ ಪೊಲೀಸರಿಂದ ತನಿಖೆ

ಕಳಿಯ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಕೆರೆಯಲ್ಲಿ ಪತ್ತೆ, ಸಾವಿನ ಬಗ್ಗೆ ಹಲವು ಅನುಮಾನ ಪೊಲೀಸರಿಂದ ತನಿಖೆ

0

ಬೆಳ್ತಂಗಡಿ : ಕಳಿಯ ದೇವಸ್ಥಾನಕ್ಕೆ ಇಂದು ಮುಂಜಾನೆ 4 ಗಂಟೆಗೆ ಧನುಪೂಜೆಗೆ ಮನೆಯಿಂದ ಹೋಗಿದ್ದ ಬಾಲಕನೋರ್ವ ನಿಗೂಢವಾಗಿ ನಾಪತ್ತೆಯಾಗಿದ್ದು ಬಾಲಕನ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಕನ ಅಸಹಜ ಸಾವಿನ ಬಗ್ಗೆ ಹಲವಾರು ಅನುಮಾನಗಳು ಮೂಡುತ್ತಿದ್ದು ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದರೆ.

ಘಟನೆ ವಿವರ: ಕುವೆಟ್ಟು ಗ್ರಾಮದ ಸಂಬೋಳ್ಯ ಬರಮೇಲು ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಗೇರುಕಟ್ಟೆ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ (15ವ) ನಾಪತ್ತೆಯಾಗಿ ಮೃತಪಟ್ಟ ಬಾಲಕ. ನಾಳ ದೇವಸ್ಥಾನಕ್ಕೆ ಸುಮಂತ್ ಸೇರಿದಂತೆ ಮೂರು ಮಂದಿ ಬಾಲಕರು ಒಟ್ಟಿಗೆ ಹೋಗುತ್ತಿದ್ದು, ಜ.14 ರಂದು ಮುಂಜಾನೆ 4 ಗಂಟೆಗೆ ಸುಮಂತ್ ಮನೆಯಿಂದ ಬರುವಾಗ ತಡವಾದ್ದರಿಂದ ಇಬ್ಬರು ಬಾಲಕರು ಆತನಿಗಾಗಿ ಕಾದು ದೇವಸ್ಥಾನಕ್ಕೆ ತೆರಳಿದ್ದರು. ಆದರೆ ಸುಮಂತ್ ಮನೆಯಿಂದ ಹೊರಟ್ಟಿದ್ದ. ದೇವಸ್ಥಾನಕ್ಕೆ ಬಂದಿರಲಿಲ್ಲ. ಇದರಿಂದ ಸಂಶಯಗೊಂಡ ಬಾಲಕರು ಆತನ ಮನೆಗೆ ಪೋನ್ ಮಾಡಿದಾಗ ಸುಮಂತ್‌ನ ಮನೆಯವರು
ಆತ ದೇವಸ್ಥಾನಕ್ಕೆ ಮುಂಜಾನೆಯೇ ಹೋಗಿದ್ದಾನೆ ಎಂದು ತಿಳಿಸಿದ್ದರು. ಆದರೆ ಆತ ದೇವಸ್ಥಾನಕ್ಕೆ ಬಂದಿಲ್ಲ ಎಂದು ಬಾಲಕರು ಹೇಳಿದಾಗ ಮನೆಯವರು ಆತಂಕಗೊಂಡು ಸ್ಥಳೀಯವಾಗಿ ಮಾಹಿತಿ ನೀಡಿದರು. ಬಾಲಕ ಬರುವ ದಾರಿಯ ನಡುವೆ ಕೆರೆ ಬಳಿ ರಕ್ತದ ಕಲೆಗಳು ಸ್ಥಳೀಯರಿಗೆ ಕಂಡು ಬಂದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯವರು, ಪೊಲೀಸ್ ಇಲಾಖೆ,ಅಗ್ನಿ ಶಾಮಕ ದಳ ಸ್ಥಳೀಯರು ಸೇರಿ ತೀರಾ ಹುಡುಕಾಟ ನಡೆಸಿದ್ದು ಜ.14 ರಂದು ಬೆಳಗ್ಗೆ 11:30 ಕ್ಕೆ ಬಾಲಕನ ಮೃತ ದೇಹ ಕೆರೆಯಲ್ಲಿ ಪತ್ತೆಯಾಗಿದೆ.ಇನ್ನು ಬಾಲಕನ ತಲೆಯ ಭಾಗಕ್ಕೆ ಗಂಭೀರವಾದ ಗಾಯವಾಗಿರೋದು ಗೊತ್ತಾಗಿದೆ. ಇನ್ನು ಸಾವಿನ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ, ಸಬ್ ಇನ್ಸ್‌ಪೆಕ್ಟ‌ರ್ ಆನಂದ್.ಎಂ, ತಹಶೀಲ್ದಾರರು ಪೃಥ್ವಿ ಸಾನಿಕಂ, ಆರ್ ಐ ಪಾವಡಪ್ಪ, ಆಡಳಿತಾಧಿಕಾರಿ, ಬಿಒ ತಾರಕೇಸರಿ, ಶಾಲಾ ಶಿಕ್ಷಕರು, ಆಗಮಿಸಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version