
ಬೆಳ್ತಂಗಡಿ; ನಗರದ ಸೈಂಟ್ ಮೇರಿ್ಸ್ ಆಂಗ್ಲಮಾಧ್ಯಮ ಶಾಲೆ ಆಯೋಜಿಸಿದ್ದ ಬೆಳ್ಳಿ ಹಬ್ಬದ ಪ್ರಯುಕ್ತ ನಡೆದ ಅಂತರ ಶಾಲಾ ಮಟ್ಟದ ವಿವಿಧ ಕಾರ್ಯಕ್ರಮಗಳಲ್ಲಿ ಎಸ್‌ಡಿಎಮ್ ಆಂಗ್ಲಮಾಧ್ಯಮ ರಾಜ್ಯ ಪಠ್ಯಕ್ರಮ ಉಜಿರೆ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
9ನೇ ತರಗತಿಯ ವಿದ್ಯಾರ್ಥಿಗಳಾದ ತನ್ಮಯ ಕೃಷ್ಣ ಮತ್ತು ಸಮರ್ಥ ಭಟ್ ಅವರು ಪ್ರದರ್ಶಿಸಿದ ವಿಜ್ಞಾನ ಮಾದರಿಗೆ ತೃತೀಯ ಬಹುಮಾನ ಲಭಿಸಿದೆ.
ಅದೇ ರೀತಿ, ಫ್ಲಾಶ್ ಫನ್ ಕಾರ್ಯಕ್ರಮದಲ್ಲಿ 9ನೇ ತರಗತಿಯ ಅಕ್ಷರ ಹಳೆಮನೆ ಹಾಗೂ 10ನೇ ತರಗತಿಯ ಜ್ಞಾನ್ ಭಾಗವಹಿಸಿ ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಈ ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಕಿ ಶೋಭಾ ಎಸ್. ಅವರು ಮಾರ್ಗದರ್ಶನ ನೀಡಿದ್ದಾರೆ.
ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕವೃಂದ, ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.