Home ಸ್ಥಳೀಯ ಸಮಾಚಾರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಾರಂಭೋತ್ಸವ ವಿವಿಧ ಕಾರ್ಯಾಲಯಗಳ ಉದ್ಘಾಟನೆ

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಾರಂಭೋತ್ಸವ ವಿವಿಧ ಕಾರ್ಯಾಲಯಗಳ ಉದ್ಘಾಟನೆ

0

ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಾರಂ ಭೋತ್ಸವವು ಮಾ.2ರಂದು ನಡೆಯಿತು.

ಉಡುಪಿ ಹಂಗಾರಕಟ್ಟೆ ಬಾಳೆಕುದ್ರು ಮಠದ ಪರಮಪೂಜ್ಯ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಡ ಶ್ರೀ ಸದಾಶಿವರುದ್ರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕೇಸರ ಡಾ. ಸತೀಶ್ಚಂದ್ರ ಸುರ್ಯಗುತ್ತು, ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ಅಧ್ಯಕ್ಷ ಶೀಧರ ಜಿ. ಭಿಡೆಮನೆ ಮುಂಡಾಜೆ, ಬೆಂಗಳೂರು ಕ್ಷೇಮವನನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್‌, ಧರ್ಮಸ್ಥಳ ಎಸ್‌.ಕೆ.ಡಿ.ಆ‌ರ್.ಡಿ.ಪಿ. ಬಿಸಿ ಟ್ರಸ್ಟ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾ‌ರ್ ಎಸ್.ಎಸ್. ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ‘ಸುಶಾಸನ’ ದೇವಳದ ನೂತನ ಆಡಳಿತ ಕಾರ್ಯಾಲಯ ಮತ್ತು ‘ಸುವಾಸ’ ತಂತ್ರಿ ನಿವಾಸ ಹಾಗೂ ಮಾಧ್ಯಮ ಕೇಂದ್ರವನ್ನು ಶ್ರೀ ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಉದ್ಘಾಟನೆ ನೆರವೇರಿಸಿದರು. ‘ಸುರಭಿ’ ಬ್ರಹ್ಮ ಕಲಶೋತ್ಸವ ಕಾಯಾ೯ಲಯವನ್ನು ಶ್ರೀ ಸದಾಶೀವೇಶ್ವರ ದೇವಸ್ಥಾನ ಸುರ್ಯದ ಅನುವಂಶಿಕ ಆಡಳಿತ ಈ ಮೊಕ್ತಸರಾದ ಡಾ.ಸತೀಶ್ಚಂದ್ರ ಉದ್ಘಾಟಿಸಿದರು. ‘ಸಮೃದ್ಧಿ’ ಹಸಿರುವಾಣಿ ಉಗ್ರಾಣವನ್ನು ಎಸ್.ಕೆ.ಡಿ.ಆರ್.ಡಿ.ಪಿ ಟ್ರಸ್ಟ್ ಧರ್ಮಸ್ಥಳದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್‌ ಕುಮಾ‌ರ್ ಉದ್ಘಾಟಿಸಿದರು. ‘ಸುಪ್ರಸಾದ’ ಭೋಜನ ಶಾಲೆಯನ್ನು ಉಜಿರೆ ರಬ್ಬ‌ರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಉದ್ಘಾಟಿಸಿದರು. ಸುರುಚಿ ಪಾಕಶಾಲೆಯನ್ನು ಬೆಂಗಳೂರು ಕ್ಷೀಮವನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರದ್ಧಾ ಅಮಿತ್ ಉದ್ಘಾಟಿಸಿದರು. ಮೋಹನ್ ಕುಮಾ‌ರ್, ಸಂಜೀವ ಶೆಟ್ಟಿ, ಕುಂಟಿನಿ, ಭಾಸ್ಕರ ಹೆಗ್ಡೆ ವಿವಿಧ ಕಡೆಗಳಲ್ಲಿ ಸ್ವಾಗತಿಸಿದರು.
ದೇವಸ್ಥಾನದ ಆಡಳಿತ ಮೊಕ್ತಸರ ಶರತ್‌ಕೃಷ್ಣ ಪಡ್ಡೆಟ್ನಾಯ ಸ್ವಾಗತಿಸಿದರು. ರಾಜಗೋಪುರ ನಿರ್ಮಾಣ ಸಮಿತಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಬಳಂಜ ವಂದಿಸಿದರು. ಎಸ್.ಡಿ.ಎಂ. ಸನಿವಾಸ ಪ.ಪೂ.ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version