
ಬೆಳ್ತಂಗಡಿ : ಬಂದೂಕು ಪ್ರಕರಣ ಮತ್ತು ಗಡಿಪಾರು ಆದೇಶ ಪ್ರಕರಣದ ಬಳಿಕ ಕಳೆದ ಒಂದು ತಿಂಗಳಿಂದ ಮಹೇಶ್ ಶೆಟ್ಟಿ ತಿಮರೋಡಿ ತಲೆಮರೆಸಿಕೊಂಡಿರುವಾಗ ತಿಮರೋಡಿ ವಿಚಾರದಲ್ಲಿ ಬೆಳ್ತಂಗಡಿಯಲ್ಲಿ ಗಿರೀಶ್ ಮಟ್ಟಣ್ಣವರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ಬೆಳ್ತಂಗಡಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಹೊರಗಡೆ ಗಿರೀಶ್ ಮಟ್ಟಣ್ಣವರ್ ಅ.11 ರಂದು ಮಾಧ್ಯಮಗಳ ಜೊತೆ ಮಾತಾನಾಡುವಾಗ ‘ತಿಮರೋಡಿ ಮಹೇಶ್ ಶೆಟ್ಟಿ ಎಲ್ಲೂ ಓಡಿಹೋಗಿಲ್ಲ ,ನಾನು ಇಂದೇ ಅವರಲ್ಲಿ ಮಾತಾನಾಡಿಕೊಂಡು ಬಂದೆ, ಪೊಲೀಸರಿಗೆ ಸಿಗದೆ ಇದ್ರೆ ಅದು ನನ್ನ ತಪ್ಪಾ’ ಎಂದು ಹೇಳಿಕೆ ನೀಡಿದ್ದರು. ಮಾಧ್ಯಮಗಳಲ್ಲಿ ಬಂದೊರುವ ವರದಿ ಆಧಾರಿಸಿ ಬೆಳ್ತಂಗಡಿ ಪೊಲೀಸರು ಅ.15 ರಂದು ಬೆಂಗಳೂರು ಗಿರೀಶ್ ಮಟ್ಟಣ್ಣವರ್ ನಿವಾಸಕ್ಕೆ ತೆರಳಿ ಅ.18 ಕ್ಕೆ ವಿಚಾರಣೆಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ನೋಟೀಸ್ ಪಡೆದುಕೊಂಡಿರುವ ಗಿರೀಶ್ ಮಟ್ಟಣ್ಣನವರ್ ಅವರು ಅ20ರಂದು ಠಾಣೆಗೆ ಹಾಜರಾಗುವುದಾಗಿ ಹೇಳಿರುವುದಾಗಿ ತಿಳಿದು ಬಂದಿದೆ.