
ಬೆಳ್ತಂಗಡಿ; 1990 ರಲ್ಲಿ ಸುಳ್ಯ ತಾಲ್ಲೂಕಿನ ಅಲೆಟ್ಟಿ ಗ್ರಾಮದ ನಾಗಪಟ್ಟಣ ಎಂಬಲ್ಲಿ ಅಕ್ರಮ ಕೂಟ ಸೇರಿ ಶಾಂತಪ್ಪ ಮತ್ತು ಸುಬ್ಬಯ್ಯ ರವರಿಗೆ ತಲ್ವಾರ್ ನಿಂದ ಕಡಿದು ತೀವ್ರ ಸ್ವರೂಪದ ರಕ್ತ ಗಾಯ ಮಾಡಿರುವುವ ಪ್ರಕರಣಕ್ಕೆ ಸಂಬಂದಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿ ಬಾಲನ್(73) ನಾಟಿ ಮನೆ, ತ್ರಿಸ್ಸೂರ್ ಜಿಲ್ಲೆ ಕೇರಳ ಎಂಬಾತನು 35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದು, ಈತನನ್ನು ಕೇರಳ ರಾಜ್ಯದ ತ್ರಿಸ್ಸೂರ್ ನಿಂದ ದಸ್ತಗಿರಿ ಮಾಡಿ ಅ.13 ರಂದು ಮಾನ್ಯ ನ್ಯಾಯಧೀಶರು JMFC ನ್ಯಾಯಾಲಯ, ಸುಳ್ಯರವರ ಮುಂದೆ ಹಾಜರು ಪಡಿಸಿದ್ದು ಸದ್ರಿ ಆರೋಪಿಗೆ ಮಾನ್ಯ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.