Home ಅಪರಾಧ ಲೋಕ ಬೆಳ್ತಂಗಡಿ : ಶಿಬಾಜೆಯಲ್ಲಿ ಶ್ರೀಧರ ಕೊಲೆ ಪ್ರಕರಣ ದೂರುದಾರ ತನಿಖೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ...

ಬೆಳ್ತಂಗಡಿ : ಶಿಬಾಜೆಯಲ್ಲಿ ಶ್ರೀಧರ ಕೊಲೆ ಪ್ರಕರಣ ದೂರುದಾರ ತನಿಖೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ ಎಸ್ಐಟಿ

0

ಬೆಳ್ತಂಗಡಿ : ಶಿಬಾಜೆ ತೋಟದಲ್ಲಿ ಶೀಧರ ಕೊಲೆ ಪ್ರಕರಣದ ಸಂಬಂಧ ಎಸ್ಐಟಿ ಅಧಿಕಾರಿಗಳು ದೂರುದಾರ ಹರೀಶ್.ಬಿ.ಮುಗೇರ ಅವರಿಗೆ ತನಿಖೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಸಾರ ಫಾರ್ಮ್‌ ಗುತ್ತು ಮನೆಯ ತೋಟದಲ್ಲಿ ಶ್ರೀಧರ (30) ಎಂಬವರನ್ನು 18-12-2022 ರಂದು ಕೊಲೆ ಮಾಡಿದ ಪ್ರಕರಣ ಸಂಬಂಧ ಮರುತನಿಖೆ ನಡೆಸಲು ಹೈಕೋರ್ಟ್ ಆದೇಶ ಮಾಡಿದಂತೆ ಎಸ್ಐಟಿ ಅಧಿಕಾರಿಗಳು ಮಾ.2 ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

ಪ್ರಕರಣ ಸಂಬಂಧ ಶ್ರೀಧರ ಕೊಲೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಶಿಬಾಜೆಯ ಹರೀಶ್.ಬಿ.ಮುಗೇರ ಎಂಬವರಿಗೆ ಎಸ್ಐಟಿ ತನಿಖಾಧಿಕಾರಿ ಡಿವೈಎಸ್ಪಿ ಹರೀಶ್.ಎಂ.ಆರ್ ಅವರು ಮಾ.3 ರಂದು ಹರೀಶ್ ಮನೆಗೆ ತೆರಳಿ ವಿಚಾರಣೆಗಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ನೋಟಿಸ್ ತಲುಪಿದ ಕೂಡಲೇ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕೆಂದು ನೋಟಿಸ್ ಜಾರಿ ಮಾಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version