Home ಅಪರಾಧ ಲೋಕ ಮುಂಡಾಜೆ ಕ್ರೈಸ್ಟ್ ಅಕಾಡೆಮಿಯಲ್ಲಿ ಆರೋಗ್ಯ ತಪಾಸಣೆ ಮತ್ತು ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ

ಮುಂಡಾಜೆ ಕ್ರೈಸ್ಟ್ ಅಕಾಡೆಮಿಯಲ್ಲಿ ಆರೋಗ್ಯ ತಪಾಸಣೆ ಮತ್ತು ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ

0


ಬೆಳ್ತಂಗಡಿ:ಮುಂಡಾಜೆಯ ಕ್ರೈಸ್ಟ್ ಅಕಾಡೆಮಿಯಲ್ಲಿ ಆರೋಗ್ಯ ತಪಾಸಣೆ ಮತ್ತು ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ ಭಾನುವಾರ ಜರಗಿತು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು ಶಿಬಿರ ಉದ್ಘಾಟಿಸಿದರು.
ಕ್ರೈಸ್ಟ್ ಅಕಾಡೆಮಿಯ ಪ್ರಿನ್ಸಿಪಾಲ್ ಫಾ.ಜಾರ್ಜ್ ಸಿ.ಎಂ.ಐ., ಮುಂಡಾಜೆ ರೋಟರಿ ಸಮುದಾಯದಳದ ಅಧ್ಯಕ್ಷ ಪಿ.ಸಿ.ಸೆಬಾಸ್ಟಿಯನ್, ಕಾರ್ಯದರ್ಶಿ ರಾಕೇಶ್, ಬೆನಕ ಆಸ್ಪತ್ರೆಯ ಜನರಲ್ ಮ್ಯಾನೇಜರ್ ದೇವಸ್ಯ, ಪಿಆರ್ ಒ ಎಸ್.ಜಿ.ಭಟ್, ರೋಟರಿ ಕ್ಲಬ್ ಬೆಳ್ತಂಗಡಿ ಮಾಜಿ ಅಧ್ಯಕ್ಷರಾದ ಅನಂತ ಭಟ್ ಮಚ್ಚಿಮಲೆ, ಮೇ.ಜ. ಎಂ.ವಿ.ಭಟ್, ವೆಂಕಟೇಶ್ವರ ಭಟ್ ಕಜೆ ಮತ್ತಿತರರು ಉಪಸ್ಥಿತರಿದ್ದರು.
ಉಚಿತ ಮಧುಮೇಹ ತಪಾಸಣೆ, ರಕ್ತದೊತ್ತಡ, ಇಸಿಜಿ,ಸ್ತ್ರೀ ರೋಗ ಮತ್ತು ಪ್ರಸೂತಿ ಪರೀಕ್ಷೆ,ಮಕ್ಕಳ ಆರೋಗ್ಯ ತಪಾಸಣೆ ಸೇರಿದಂತೆ ಸಾಮಾನ್ಯ ಆರೋಗ್ಯ ತಪಾಸಣೆ ನಡೆಯಿತು. ಸುಮಾರು 110 ಮಂದಿ ಶಿಬಿರದಲ್ಲಿ ಪಾಲ್ಗೊಂಡರು.
ರೋಟರಿ ಸಮುದಾಯದ ಮುಂಡಾಜೆ ನೇತೃತ್ವದಲ್ಲಿ ಕ್ರೈಸ್ಟ್ ಅಕಾಡೆಮಿ ಮುಂಡಾಜೆ ಸಹಭಾಗಿತ್ವದಲ್ಲಿ ಉಜಿರೆ ಬೆನಕ ಚಾರಿಟೇಬಲ್ ಟ್ರಸ್ಟ್ ಹಾಗೂ ಬೆನಕ ಹೆಲ್ತ್ ಸೆಂಟರ್ ವತಿಯಿಂದ ಕಾರ್ಯಕ್ರಮ ನಡೆಯಿತು.

NO COMMENTS

LEAVE A REPLY

Please enter your comment!
Please enter your name here

Exit mobile version