Home ಸ್ಥಳೀಯ ಸಮಾಚಾರ ಧರ್ಮಸ್ಥಳ ಪ್ರಕರಣ ಆಂಬುಲೆನ್ಸ್ ಚಾಲಕ ಹಮೀದ್ ಹಾಗೂ ಜಲೀಲ್ ಅವರ ವಿಚಾರಣೆ ಮುಗಿಸಿದ ಎಸ್.ಐ.ಟಿ

ಧರ್ಮಸ್ಥಳ ಪ್ರಕರಣ ಆಂಬುಲೆನ್ಸ್ ಚಾಲಕ ಹಮೀದ್ ಹಾಗೂ ಜಲೀಲ್ ಅವರ ವಿಚಾರಣೆ ಮುಗಿಸಿದ ಎಸ್.ಐ.ಟಿ

0

ಬೆಳ್ತಂಗಡಿ: ಧರ್ಮಸ್ಥಳ
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್
ಐಟಿ ವಿಚಾರಣೆಗಾಗಿ ಎರಡನೇ ಬಾರಿ ಇಬ್ಬರು ಆಂಬುಲೆನ್ಸ್ ಚಾಲಕರಾದ ಜಲೀಲ್ ಬಾಬಾ ಮತ್ತು ಹಮೀದ್ ಸೋಮವಾರ ಮಧ್ಯಾಹ್ನ ಬೆಳ್ತಂಗಡಿ ಎಸ್ ಐಟಿಗೆ ಆಗಮಿಸಿದ್ದು ಸಂಜೆಯ ವೇಳೆಗೆ ತಮ್ಮ ಹೇಳಿಕೆಗಳನ್ನು ದಾಖಲಿಸಿ ಹಿಂತಿರುಗಿದ್ದಾರೆ.
ಬೆಳ್ತಂಗಡಿಯಲ್ಲಿ ಕಳೆದ ಸುಮಾರು 20 ವರ್ಷಗಳಿಗೂ ಹೆಚ್ಚು ಸಮಾಯದಿಂದ ಆಂಬುಲೆನ್ಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರನ್ನು ಎಸ್
ಐಟಿ ಶನಿವಾರ ರಾತ್ರಿವರೆಗೆ ಮಾಹಿತಿ ಪಡೆದು ಹೇಳಿಕೆ ದಾಖಲಿಸುವ ಕಾರ್ಯ ನಡೆದಿತ್ತು. ಆದರೆ ಅದು ಪೂರ್ಣಗೊಳ್ಳದ ಕಾರಣ ಸೋಮವಾರ ಮತ್ತೆ ಎಸ್ ಐಟಿಗೆ ಆಗಮಿಸಿದ್ದರು.
ಧರ್ಮಸ್ಥಳ ಗ್ರಾಮದಿಂದ ಮೃತದೇಹಗಳನ್ನು ಸಾಗಾಟ ಮಾಡಿರುವ ಕುರಿತು ಇವರಿಂದ ಮಾಹಿತಿ ಪಡೆಯುವ ಕಾರ್ಯ ನಡೆದಿದೆ. ಪೋಲಿಸ್ ಮಾಹಿತಿಯಂತೆ ಇವರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಾಟ ಮಾಡಿದ್ದು ಪೊಲೀಸ್ ಮಹಜರಿನ ಕುರಿತು ದಾಖಲೆಗಳಿವೆ. ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ಹೆಚ್ಚಿನ ಮೃತದೇಹಗಳನ್ನು ಸಾಗಾಟ ಮಾಡಿದ್ದು ಆತ್ಮಹತ್ಯೆ ಮಾಡಿಕೊಂಡವರು, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದವರು, ಅನಾಥ ಶವಗಳನ್ನು ಸಾಗಾಟ ಮಾಡಿದಾಗಿ ಅವರು ಎಸ್ ಐಟಿಗೆ ಮಾಹಿತಿ ನೀಡಿರುವುದಾಗು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version