Home ರಾಜಕೀಯ ಸಮಾಚಾರ ಬೆಳ್ತಂಗಡಿ ಇಂದಿರಾ ಕ್ಯಾಂಟೀನ್ ಅಕ್ಟೋಬರ್ ನಲ್ಲಿ ಉದ್ಘಾಟನೆ; ಇಂದಿರಾ ಕ್ಯಾಂಟೀನ್ ಗೆ ರಕ್ಷಿತ್ ಶಿವರಾಂ ಭೇಟಿ

ಬೆಳ್ತಂಗಡಿ ಇಂದಿರಾ ಕ್ಯಾಂಟೀನ್ ಅಕ್ಟೋಬರ್ ನಲ್ಲಿ ಉದ್ಘಾಟನೆ; ಇಂದಿರಾ ಕ್ಯಾಂಟೀನ್ ಗೆ ರಕ್ಷಿತ್ ಶಿವರಾಂ ಭೇಟಿ

59
0

ಬೆಳ್ತಂಗಡಿ. ಕರ್ನಾಟಕ ಸರ್ಕಾರವು ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಅಗ್ಗದ ದರದಲ್ಲಿ ಪೌಷ್ಟಿಕಾಂಶಯುಕ್ತ ಆಹಾರವನ್ನು ಒದಗಿಸುವ ಯೋಜನೆ ಇಂದಿರಾ ಕ್ಯಾಂಟೀನ್ ಬೆಳ್ತಂಗಡಿಯಲ್ಲಿ ಅಕ್ಟೋಬರ್ ನಲ್ಲಿ ಪ್ರಾರಂಭವಾಗಲಿದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಉದ್ಘಾಟನೆ ಮಾಡಲಿದ್ದಾರೆ.
ಇಂದಿರಾ ಕ್ಯಾಂಟೀನ್ ಗೆ ಇಂದು ಕೆಪಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ಅಲ್ಲಿನ ಸಿದ್ದತೆಗಳ ಬಗ್ಗೆ ಮಾಹಿತಿ ಪಡೆದರು

ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಸತೀಶ್ ಕೆ ಕಾಶಿಪಟ್ಟಣ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಶೇಖರ್ ಕುಕ್ಕೆಡಿ, ಪಟ್ಟಣ ಪಂಚಾಯತ್ ಸದಸ್ಯರಾದ ಜಗದೀಶ್ ಡಿ,ಪಟ್ಟಣ ಪಂಚಾಯಿತಿ ಮುಖ್ಯಅಧಿಕಾರಿ ರಾಜೇಶ್ ಕೋಟ್ಯಾನ್,
ಪ್ರಮುಖರಾದ ಜಗದೀಶ್ ಜೈನ್ ನಾವರ ನಿತೀಶ್ ಕೋಟ್ಯಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here