ಬೆಳ್ತಂಗಡಿ : ಧರ್ಮಸ್ಥಳ ನೇತ್ರಾವತಿ ಸೇತುವೆಯ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಸುಮಾರು 50-55 ವರ್ಷ ಪ್ರಾಯದ ಅಪರಿಚಿತ ಗಂಡಸಿ ಮೃತದೇಹ ಇದಾಗಿದ್ದು
ನೇತ್ರಾವತಿ ಸೇತುವೆಯ ಕೆಳಭಾಗ ನೇತ್ರಾವತಿ ನದಿ ನೀರಿನಲ್ಲಿ ನ.21 ರಂದು ಮೃತದೇಹ ಪತ್ತೆಯಾಗಿದೆ.
ಮೃತದೇಹ ವ್ಯಕ್ತಿ BIG HIT ಎಂದು ಬರೆದಿರುವ ಕಪ್ಪು ಬಣ್ಣದ ಒಳಚಡ್ಡಿ ಮಾತ್ರ ಧರಿಸಿಕೊಂಡಿದ್ದು, ಎಡಕಾಲಿನ ಪಾದದ ಬಳಿ ಹಳೆಯ ಗಾಯವಿರುತ್ತದೆ. ಮೃತದೇಹನ್ನು ಮಂಗಳೂರು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ,
ನದಿಯಲ್ಲಿದ್ದ ಮೃತದೇಹವನ್ನು ಮೇಲೆತ್ತಲು ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಹಕರಿಸಿದರು.
ಘಟನೆಯ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಮೃತದೇಹದ ವಾರಿಸುದಾರರು ಇದ್ದಲ್ಲಿ ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
