
ಬೆಳ್ತಂಗಡಿ; ನಾರಾವಿ ಗ್ರಾಮಪಂಚಾಯತಿನ ಮಾಜಿ ಸದಸ್ಯ ಶಿಕ್ಷಣ ಪ್ರೇಮಿ ಕುತ್ಲೂರು ನಿವಾಸಿ ಕುಕ್ಕುಜೆ ರಾಮಚಂದ್ರಭಟ್ ಆ29 ರಂದು ನಿಧನರಾಗಿದ್ದಾರೆ.
ಲೋ ಬಿಪಿಯಿಂದಾಗಿ ಕುಸಿದು ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಆವೇಳೆಗೆ ಅವರು ಮೃತಪಟ್ಟಿದ್ದರು.
ನಾರಾವಿ ಗ್ರಮಾಪಂಚಾಯತಿನ ಮಾಜಿ ಸದಸ್ಯರಾದ ಇವರು ಕುತ್ಲೂರು ಶಾಲೆಯ ಎಸ್.ಡಿ.ಎಂ ಸಿ ಅಧ್ಯಕ್ಷರಾಗಿ ಶಾಲೆ ರಾಷ್ಟ್ರ ಮಟ್ಟದಲ್ಲಿಯೇ ಗುರಿತಿಸುವಂತೆ ಮಾಡಿದ್ದರು. ಇವರ ನೇತೃತ್ವದಲ್ಲಿ ಇತ್ತೀಚೆಗಷ್ಟೆ ಕುತ್ಲೂರು ಶಾಲೆಯ ಮಕ್ಕಳು ಮುಖ್ಯಮಂತ್ರಿ ಅವರನ್ನು ಬೇಟಿಯಾಗಿದ್ದರು. ರಾಮಚಂದ್ರ ಭಟ್ ಅವರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.