
ಬೆಳ್ತಂಗಡಿ; ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿ ಸೆಪ್ಟಂಬರ್ 1 ರಂದು ನಡೆಯುವ “ಧರ್ಮಸ್ಥಳ ಚಲೋ “ ನಮ್ಮ ನಡಿಗೆ-ಧರ್ಮದೆಡೆಗೆ ಹಾಗೂ ಬೃಹತ್ ಸಮಾವೇಶ ಕುರಿತು ಇಂದು ಪೂರ್ವಭಾವಿ ಸಭೆ ಮತ್ತು ಸ್ಥಳ ಪರಿಶೀಲನೆ ನಡೆಸಲಾಯಿತು..
ಈ ಸಂದರ್ಭದಲ್ಲಿ ಕಾರ್ಯಕ್ರಮದ ರಾಜ್ಯ ಸಂಚಾಲಕರು ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರು ಎಸ್. ಆರ್. ವಿಶ್ವನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು ಸುನಿಲ್ ಕುಮಾರ್ ಹಾಗೂ ಪ್ರೀತಮ್ ಗೌಡ, ರಾಜ್ಯ ಕಾರ್ಯದರ್ಶಿಗಳು ದ. ಕ. ಜಿಲ್ಲಾ ಸಂಸದರು ಕ್ಯಾ. ಬ್ರಿಜೇಶ್ ಚೌಟರವರು,ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ತಮ್ಮೆಶ್ ಗೌಡ, ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಉಪಸ್ಥಿತರಿದ್ದರು