Home ಅಪಘಾತ ರೆಖ್ಯ ಕಾಂಕ್ರೀಟ್ ಚರಂಡಿಗೆ ಬಿದ್ದು ಲಾರಿ ಚಾಲಕ ಸಾವು

ರೆಖ್ಯ ಕಾಂಕ್ರೀಟ್ ಚರಂಡಿಗೆ ಬಿದ್ದು ಲಾರಿ ಚಾಲಕ ಸಾವು

0

ಬೆಳ್ತಂಗಡಿ: ಕಾಂಕ್ರೀಟ್ ಚರಂಡಿಗೆ ಬಿದ್ದು ಲಾರಿ ಚಾಲಕ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕು ರೇಖ್ಯಾ ಗ್ರಾಮ ನೇಲ್ಯಡ್ಕ ಎಂಬಲ್ಲಿ ನಡೆದಿದೆ. ಬೆಂಗಳೂರು ನೆಲಮಂಗಲ ನಿವಾಸಿ ಹುನಮಂತರಾಯಪ್ಪ (60) ಮೃತ ಲಾರಿ ಚಾಲಕ.

ಈ ಬಗ್ಗೆ ಮೃತರ ಮಗ ರಾಜಶೇಖರ (37) ಎಂಬವರು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ತಂದೆ ಹುನಮಂತರಾಯಪ್ಪ (60) ರವರು ಕೆಎ 52 ಬಿ 9011 ಲಾರಿಯಲ್ಲಿ ಚಾಲಕರಾಗಿದ್ದು, ದಿನಾಂಕ: 27-08-2025 ರಂದು ರಾತ್ರಿ ಸಮಯ ಮಂಗಳೂರಿನಿಂದ ಬೆಂಗಳೂರು ಕಡೆಗೆ ಅವರ ಬಾಬು ಲಾರಿಯನ್ನು ಚಲಾಯಿಸಿಕೊಂಡು ಬಂದು ದಿನಾಂಕ: 28-08-2025 ರಂದು ಮುಂಜಾನೆ 01-00 ಗಂಟೆ ಸುಮಾರಿಗೆ ಯ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಅಥವಾ ಇನ್ಯಾವುದೋ ಕಾರಣಕ್ಕೆ ಲಾರಿಯಿಂದ ಇಳಿದು ರಸ್ತೆ ಬದಿಗೆ ಹೋಗುವ ಸಮಯ ಆಕಸ್ಮಿಕವಾಗಿ ರಸ್ತೆ ಕಾಮಗಾರಿಯಲ್ಲಿರುವ ಕಾಂಕ್ರೀಟ್ ಚರಂಡಿಯ ಒಳಗೆ ಬಿದ್ದು ಅಸ್ವಸ್ಥರಾದವರನ್ನು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಸಾಗಿಸುವ ಸಮಯ ದಾರಿ ಮಧ್ಯೆ ಮೃತಪಟ್ಟಿರಬಹುದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version