Home ಬ್ರೇಕಿಂಗ್‌ ನ್ಯೂಸ್ ಧರ್ಮಸ್ಥಳ ಪ್ರಕರಣ; ಬೆಳ್ತಂಗಡಿ ಯಲ್ಲಿ ಎಸ್.ಐ.ಟಿ ಕಚೇರಿ ಇಂದಿನಿಂದ ತನಿಖೆ ಆರಂಭ?

ಧರ್ಮಸ್ಥಳ ಪ್ರಕರಣ; ಬೆಳ್ತಂಗಡಿ ಯಲ್ಲಿ ಎಸ್.ಐ.ಟಿ ಕಚೇರಿ ಇಂದಿನಿಂದ ತನಿಖೆ ಆರಂಭ?

22
0

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ಬಗ್ಗೆ ತನಿಖೆ ನಡೆಸಲು ನಿಯೋಜನೆಯಾಗಿರುವ ಎಸ್.ಐ.ಟಿ ತಂಡ ಬೆಳ್ತಂಗಡಿ ಯನ್ನು ಕೇಂದ್ರವಾಗಿಸಿ ಕಾರ್ಯನಿರ್ವಹಿಸಲಿರುವುದಾಗಿ ತಿಳಿದು ಬಂದಿದ್ದು ಜು 25ರಂದು ಬೆಳ್ತಂಗಡಿಯಲ್ಲಿ ಎಸ್.ಐ.ಟಿ ಕಚೇರಿ ಆರಂಭವಾಗಲಿದ್ದು ಇಲ್ಲಿ ಎಲ್ಲ ಸುದ್ದತೆಗಳನ್ನು ಮಾಡಲಾಗುತ್ತಿರುವುದಾಗಿ ತಿಳಿದು ಬಂದಿದೆ
ಬೆಳ್ತಂಗಡಿ ಪೊಲೀಸ್ ಠಾಣೆಯ ಸಮೀಪವೇ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ವಸತಿ ಗೃಹವನ್ನೇ ಎಸ್.ಐ.ಟಿ ಕೇಂದ್ರವಾಗಿ ಮಾಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.
ನೂತನವಾಗಿ ನಿರ್ಮಾಣಗೊಂಡಿರುವ ಈ ವಸತಿಗೃಹಗಳ ಉದ್ಘಾಟನೆ ಇನ್ನೂ ನಡೆದಿಲ್ಲ ಇಲ್ಲಿ ಇಡೀ ತಂಡ ಕಾರ್ಯ ನಿರ್ವಹಿಸಲು ಅಗತ್ಯವಿರುವ ಸ್ಥಳಾವಕಾಶಗಳಿದೆ. ಪೊಲೀಸ್ ಠಾಣೆಯ ಆವರಣದ ಒಳಗೆಯೇ ಈ ಕಟ್ಟಡ ಇರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಹಾಗೂ ತನಿಖೆ ವಿಚಾರಣೆಗಳ ದೃಷ್ಟಿಯಿಂದ ವಿಶೇಷ ತನಿಖಾ ತಂಡಕ್ಕೆ ಇದು ಸೂಕ್ತ ಸ್ಥಳವಾಗಿದೆ.
ಮಂಗಳೂರಿನಲ್ಲಿ ಕಚೇರಿ ಸಿದ್ದಪಡಿಸಿದರೂ ಧರ್ಮಸ್ಥಳ ದಿಂದ 75 ಕಿ ಮೀ ದೂರವಿದ್ದು ತನಿಖಾ ದೃಷ್ಟಿಯಿಂದ ಕಷ್ಟವಾಗುತ್ತದೆ ಈ ಹಿನ್ನಲೆಯಲ್ಲಿ ಬೆಳ್ತಂಗಡಿ ಯನ್ನು ಕೇಂದ್ರವಾಗಿಸಿ ಕಚೇರಿ ಆರಂಭಿಸಿ ತನಿಖೆಯನ್ನು ನಡೆಸಲು ತಂಡ ಮುಂದಾಗಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here