Home ಸ್ಥಳೀಯ ಸಮಾಚಾರ ಉಜಿರೆ ಸೈoಟ್ ಜಾರ್ಜ್ ಚರ್ಚಿನಲ್ಲಿ ಸಂಡೇ ಸ್ಕೂಲ್ ವಾರ್ಷಿಕ ದಿನ ಆಚರಣೆ

ಉಜಿರೆ ಸೈoಟ್ ಜಾರ್ಜ್ ಚರ್ಚಿನಲ್ಲಿ ಸಂಡೇ ಸ್ಕೂಲ್ ವಾರ್ಷಿಕ ದಿನ ಆಚರಣೆ

0

ಬೆಳ್ತಂಗಡಿ;  ಉಜಿರೆ ಸೇಂಟ್ ಜಾರ್ಜ್ ವಠಾರದಲ್ಲಿ ಸಂಡೇ ಸ್ಕೂಲ್ ವಾರ್ಷಿಕ ದಿನ ಮತ್ತು ಸೇಂಟ್ ಥೋಮಸರ ಹಬ್ಬವನ್ನು ಆಚರಿಸಲಾಯಿತು.ಕಳೆದ ವರ್ಷದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಮಕ್ಕಳ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟರು. ಪುತ್ತೂರು ಮೈನಸ್ ಸೆಮಿನರಿ ರೆಕ್ಟರ್ ಫಾ ರೊಬಿನ್ ಕೇಳoಪರಂಬಿಲ್, ಒ ಸಿ ಡಿ ಕರ್ಮಲಾ ಮಾತ ಆಶ್ರಮದ ಸುಪೀರಿಯರ್ ಫಾ ಜೋಸೆಫ್ ಇಲ್ಲಿಕ್ಕಲ್, ಉಜಿರೆ ಸೈಂಟ್ ಜಾರ್ಜ್ ಚರ್ಚಿನ ಧರ್ಮಗುರುಗಳಾದ ಬಿಜು ಮ್ಯಾಥ್ಯೂಅಂಬಟ್ ಬಲಿಪೂಜೆಯನ್ನು ಅರ್ಪಿಸಿದರು.ಕಾರ್ಯಕ್ರಮದಲ್ಲಿ ಸಂಡೇ ಸ್ಕೂಲ್ ಪಿ ಟಿ ಎ ಅಧ್ಯಕ್ಷರಾದ ನಿಜೋ ತುಂಡಿಪರಂಬಿಲ್ ಚರ್ಚಿನ ಪಾಲನಾ ಸದಸ್ಯರಾಗುವ ಸನ್ನಿ ಮನ್ನಿಯಕುನ್ನಲ್, ಜೋಸ್ ಪೇರುಕರೋಟ್, ಆಂಟನಿ ತೋಟಕಾಟ್, ಜೋಬಿ ಮುಳವನ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಂಡೇ ಸ್ಕೂಲ್ ಮುಖ್ಯೋಪಾಧ್ಯಾಯರಾದ ಥೋಮಸ್ ಪೂವತಿಂಗಲ್ ರವರ ಧನ್ಯವಾದ ಸಮರ್ಪಣೆಯಿಂದ ಕಾರ್ಯಕ್ರಮ ಮುಕ್ತಾಯಗೊಂಡಿತು.

NO COMMENTS

LEAVE A REPLY

Please enter your comment!
Please enter your name here

Exit mobile version