
ಬೆಳ್ತಂಗಡಿ : ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಪರಿಸರ ದಿನವನ್ನು ಜು. 6ರಂದು ಆಚರಿಸಲಾಯಿತು. ಕಥೋಲಿಕ್ ಸಭಾ, ಎಸ್.ಪಿ.ವಿ ಹಾಗೂ ಐಸಿವೈಎಂ ವತಿಯಿಂದ ನಡೆದ ಕಾರಗಯಕ್ರಮದಲ್ಲಿ ಎಲ್ಲರಿಗೂ ಗಿಡಗಳನ್ನು ಹಂಚಲಾಯಿತು. ಪರಿಸರ ಜಾಗ್ರತೆಗಾಗಿ ಮುಖ್ಯ ಗುರುಗಳಾದ ವಂ.ಸ್ಟಾನಿ ಗೋವಿಯಸ್ ಅವರು ಪರಿಸರದ ಉಳಿವಿನ ಅಗತ್ಯತೆ ಬಗ್ಗೆ ತಿಳಿ ಹೇಳಿದರು. ಕಾರ್ಯಕ್ರಮದಲ್ಲಿ ಸಹಾಯಕ ಗುರುಗಳಾದ ರೆ. ಪಾ. ಲ್ಯಾರಿ ಪಿಂಟೋ, ಧರ್ಮಭಗಿನಿಯರು, ಕ್ಯಾಥೋಲಿಕ್ ಸಭಾ ಆಧ್ಯಕ್ಷ ವಿನ್ಸ್ಸೆಂಟ್ ಡಿ ಸೋಜಾ, ಎಸ್.ವಿ.ಪಿ ಅಧ್ಯಕ್ಷ ಸಿರಿಲ್ ಸಿಕ್ವೆರಾ, ಐಸಿವೈಎಂ ಕೋರ್ಡಿನೆಟರ್ ವಿಲಿಯಂ ಸಿಕ್ವೆರ, ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಮೊರಾಸ್, ಕಾರ್ಯದರ್ಶಿ ನೆಲ್ಸನ್ ಲಾಸ್ರದೋ, ಹಾಗೂ ಸಮಸ್ತ ಕ್ರೈಸ್ತ ಬಾಂದವರು ಹಾಜರಿದ್ದು ಸರ್ವ ಆಯೋಗದ ಸಂಯೋಜಕ ರಿಚಾರ್ಡ್ ಮೋರಸ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ವಿತ್ತರು.