Home ಅಪಘಾತ ಅಂಡಿಂಜೆ; ಪವರ್ ಮ್ಯಾನ್ ನಾರಾವಿ ನಿವಾಸಿ ಸುಧಾಕರ  ಅಸಹಜ ಸಾವು

ಅಂಡಿಂಜೆ; ಪವರ್ ಮ್ಯಾನ್ ನಾರಾವಿ ನಿವಾಸಿ ಸುಧಾಕರ  ಅಸಹಜ ಸಾವು

30
0

ಬೆಳ್ತಂಗಡಿ: ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ವೇಣೂರು ಶಾಖೆಯ ಪವರ್ ಮ್ಯಾನ್ ನಾರಾವಿ ನಿವಾಸಿ ಕಿಟ್ಟ ಯಾನೆ ಸುಧಾಕರ(50) ಅಸಹಜವಾಗಿ ಸಾವನ್ನಪ್ಪಿದ ಘಟನೆ ಮಾ.26ರಂದು ನಡೆದಿದೆ.
ಕರ್ತವ್ಯದಲ್ಲಿದಲ್ಲಿ ಇದ್ದ ಇವರು ಅಂಡಿಜೆಯಲ್ಲಿ ರಸ್ತೆ ಬದಿಯಲ್ಲಿ ವಿದ್ಯುತ್ ಕಂಬದ ಹತ್ತಿರ ಬಿದ್ದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಇವರನ್ನು ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದರು. ಈ ವೇಳೆ ಅವರು ಸಾವನ್ನಪ್ಪಿದ್ದಾರುವುದಾಗಿ ಅಲ್ಲಿನ ವೈದ್ಯರು ದೃಢಪಡಿಸಿದರು. ಇವರ
ಮೈಮೇಲೆ ಯಾವುದೇ ಗಾಯದ ಕುರುಹುಗಳು ಕಂಡುಬಂದಿಲ್ಲದಿರುವುದರಿಂದ ಯಾವ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಪೋಸ್ಟ್ ಮಾರ್ಟಂ ಬಳಿಕ ತಿಳಿದು ಬರಬೇಕಿದೆ

LEAVE A REPLY

Please enter your comment!
Please enter your name here