Home ಸ್ಥಳೀಯ ಸಮಾಚಾರ ಧರ್ಮಸ್ಥಳ: ನೇರ್ತನೆಯಲ್ಲಿ 5ಲಕ್ಷ ವೆಚ್ಚದಲ್ಲಿ ಆನೆ ಕಂದಕ ನಿರ್ಮಾಣ

ಧರ್ಮಸ್ಥಳ: ನೇರ್ತನೆಯಲ್ಲಿ 5ಲಕ್ಷ ವೆಚ್ಚದಲ್ಲಿ ಆನೆ ಕಂದಕ ನಿರ್ಮಾಣ

0

ಬೆಳ್ತಂಗಡಿ;  ಕಳೆದ ಎರಡು-ಮೂರು ವರ್ಷಗಳಿಂದ ಕಾಡಾನೆಯ ನಿರಂತರ ಉಪಟಳದಿಂದ ಬೇಸತ್ತು ಹೋಗಿದ್ದ ಧರ್ಮಸ್ಥಳ ಗ್ರಾಮದ ನೇರ್ತನೆ ಪ್ರದೇಶಕ್ಕೆ ಇದೀಗ ರಾಜ್ಯ ಸರಕಾರ ಆನೆ ಕಂದಕ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ಮಂಜೂರುಗೊಳಿಸಿದ್ದು ಆನೆ ಕಂದಕದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ನೇರ್ತನೆ ಪರಿಸರದಲ್ಲಿ ಕಾಡಾನೆಗಳ ಹಿಂಡು ನಿರಂತರವಾಗಿ ಓಡಾಟ ನಡೆಸುತ್ತಾ ಕೃಷಿ ಭೂಮಿಗೆ ನುಗ್ಗಿ ಕೃಷಿಗೆ ಹಾನಿಯುಂಟು ಮಾಡುತ್ತಿತ್ತು. ಆನೆಯನ್ನು ಅರಣ್ಯಕ್ಕೆ ಓಡಿಸಿದರೆ ಎರಡೇ ದಿನದಲ್ಲಿ ಅದು ಮತ್ತೆ ಬಂದು ಕೃಷಿಗೆ ಹಾನಿ ಯುಂಟು ಮಾಡುತ್ತಿದೆ. ಇಲ್ಲಿ ಕಳೆದ ಎರಡು ವರ್ಷಗಳಲ್ಲಿ ಲಕ್ಷಾಂತರ ಮೌಲ್ಯದ ಕೃಷಿಗೆ ಕಾಡಾನೆಗಳು ಹಾನಿಯುಂಟುಮಾಡಿತ್ತು. ಇದೀಗ ಸರಕಾರದಿಂದ ಅರಣ್ಯ ಇಲಾಖೆಯ ಮೂಲಕ
5 ಲಕ್ಷ ರೂ. ಮಂಜೂರಾಗಿದ್ದು ಒಂದೂವರೆ ಕಿ.ಮೀ ದೂರದವರೆಗೆ ಆನೆ ಕಂದಕ ನಿರ್ಮಾಣವಾಗಲಿದೆ. ಆನೆ ಕಂದಕದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಇದೀಗ ನೇರ್ತನೆಯ ಅತಿ ಹೆಚ್ಚು ಆನೆ ದಾಳಿಯಾಗುತ್ತಿದ್ದ ಪ್ರದೇಶದಲ್ಲಿ ಆನೆ ಕಂದಕ ನಿರ್ಮಿಸಲಾಗಿದೆ. ಕಾಡಾನೆಗಳು ಇಲ್ಲಿ ಕೃಷಿಭೂಮಿಗೆ ನೇರವಾಗಿ ನುಗ್ಗುವುದು ಕಡಿಮೆಯಾಗಲಿದೆ. ಅರಣ್ಯಕ್ಕೆ ತಾಗಿಕೊಂಡಿರುವ ಇತರ ಪ್ರದೇಶಗಳಿಗೂ ಕಂದಕ ನಿರ್ಮಿಸಿದರೆ ಮಾತ್ರ ಆನೆಯ ಉಪಟಳ ಸಂಪೂರ್ಣವಾಗಿ ತಡೆಯಲು ಸಾಧ್ಯವಿದೆ. ಇನ್ನೂ ಸುಮಾರು ಮೂರುವರೆ ಕಿ.ಮೀ ಉದ್ದಕ್ಕೆ ಆನೆ ಕಂದಕ ನಿರ್ಮಾಣಮಾಡಬೇಕಾಗಿದೆ ಹಾಗೂ ತೋಡು ಹಾಗು ಮುರಕಲ್ಲಿನ ಪ್ರದೇಶಗಳಲ್ಲಿ ತಡೆ ಬೇಲಿಯನ್ನು ನಿರ್ಮಿಸಬೇಕಾದ ಅಗತ್ಯತೆಯಿದೆ. ಮುಂದಿನ ದಿನಗಳಲ್ಲಿ ಇದಕ್ಕೂ ಅನುದಾನ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಇಲ್ಲಿನ ನಿವಾಸಿಗಳು.

ರಕ್ಷಿತ್ ಶಿವರಾಂ ಸಹಕಾರದಿಂದ ಅನುದಾನ ಮಂಜೂರು

ಕಳೆದ ಕೆಲವು ವರ್ಷಗಳಿಂದ ಕಾಡಾನೆ ದಾಳಿಯಿಂದ‌ ಇಲ್ಲಿನ‌ ಜನರು ತತ್ತರಿಸಿ ಹೋಗಿದ್ದರು. ಈ ಬಗ್ಗೆ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಅವರ ಗಮನ ಸೆಳೆದಾಗ ಅವರು ಕೂಡಲೇ ಅರಣ್ಯ ಸಚಿವರ ಬಳಿ ಕರೆದೊಯ್ದು ಮನವಿ ಸಲ್ಲಿಸಿದ್ದರು ಬಳಿಕ ಅನುದಾನ ಒದಗಿಸಲು ಎಲ್ಲ ಪ್ರಯತ್ನ ನಡೆಸಿದ್ದರು ಇದೀಗ ಅನುದಾನ ಒದಗಿಸುವ ಕಾರ್ಯ ಮಾಡಿದ್ದಾರೆ. ಆನೆ ಕಂದಕ ನಿರ್ಮಾಣದಿಂದಾಗಿ ಈ ಪ್ರದೇಶದ ಜನರ ಬಹುದಿನಗಳ ಕನಸು ಈಡೇರಿದಂತಾಗಿದೆ ಎನ್ನುತ್ತಿದ್ದಾರೆ ಧರ್ಮಸ್ಥಳ ಗ್ರಾ.ಪಂ ಮಾಜಿ ಸದಸ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಟಿ.ವಿ ದೇವಸ್ಯ ಅವರು

ಬಹುದಿನಗಳ ಬೇಡಿಕೆ ಈಡೇರಿದೆ

ಹಿಂದೆಲ್ಲ ಅಪರೂಪಕ್ಕೆ ಆನೆಗಳು ಬರುತ್ತಿದ್ದವು ಇದೀಗ ಕಳೆದ ಎರಡುಮೂರು ವರ್ಷಗಳಿಂದ ಆನೆಗಳ ಉಪಟಳ ತೀರಾ ಹೆಚ್ಚಾಗಿದೆ. ಅರಣ್ಯ ಇಲಾಖೆಯವರು ಆನೆ ಕಂದಕವನ್ನು ನಿರ್ಮಿಸಿ ನೀಡಿರುವುದು ಈ ಪ್ರದೇಶದ ಜನರಿಗೆ ತುಂಬಾ ಪ್ರಯೋಜನ ಕಾರಿಯಾಗಿದೆ. ಇಲ್ಲಿನ ನಿವಾಸಿಗಳು ಸಮಸ್ಯೆಯ ಬಗ್ಗೆ ಟಿ‌.ವಿ ದೇವಸ್ಯ ಅವರಲ್ಲಿ ತಿಳಿಸಿದಾಗ ಅವರು ರಕ್ಷಿತ್ ಶಿವರಾಂ ಅವರಲ್ಲಿ ಕರೆದೊಯ್ದು ಮನವಿ ಸಲ್ಲೊಸಿದ್ದಲ್ಲದೆ ಬಳಿಕ ಅರಣ್ಯ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸುವ ಕಾರ್ಯ ಮಾಡಿದ್ದರು ಹಾಗೂ ಅನುದಾನ ಒದಗಿಸಲು ಪ್ರಯತ್ನಿಸಿದ್ದಾರೆ   ಅನುದಾನ ಒದಗಿಸಲು ಪ್ರಯತ್ನಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ
ತಂಗಚ್ಚನ್ ಎನ್.ಪಿ
ಮಾಜಿ ಸೈನಿಕರು, ನಿರ್ದೇಶಕರು ಸೇವಾಸಹಕಾರಿ ಬ್ಯಾಂಕ್ ಧರ್ಮಸ್ಥಳ

ನೇರ್ತನೆ ಪ್ರದೇಶದಲ್ಲಿ ಸುಮಾರು 5 ಕಿಮೀಯಷ್ಟು ದೂರಕ್ಕೆ ಆನೆ ಕಂದಕ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲಾಗಿದೆ. ಪ್ರಥಮ ಹಂತದಲ್ಲಿ ಒಂದೂವರೆ ಕಿಮೀ ದೂರ ಆನೆಕಂದಕ ನಿರ್ಮಾಣವಾಗುತ್ತಿದ್ದು ಅನುದಾನದ ಆಧಾರದಲ್ಲಿ ಮುಂದಿನ ಹಂತದಲ್ಲಿ ಕಾಮಗಾರಿ ನಡೆಯಲಿದೆ.
ತ್ಯಾಗರಾಜ್,
ಆರ್ ಎಫ್ ಒ, ಬೆಳ್ತಂಗಡಿ

NO COMMENTS

LEAVE A REPLY

Please enter your comment!
Please enter your name here

Exit mobile version