Home ಅಪರಾಧ ಲೋಕ ವಿದ್ಯಾರ್ಥಿನಿಯ ಬ್ಯಾಗ್ ಎಳೆದು ಅವಾಚ್ಯ ಶಬ್ದಗಳಿಂದ ನಿಂದನೆ: ದೂರು ದಾಖಲು

ವಿದ್ಯಾರ್ಥಿನಿಯ ಬ್ಯಾಗ್ ಎಳೆದು ಅವಾಚ್ಯ ಶಬ್ದಗಳಿಂದ ನಿಂದನೆ: ದೂರು ದಾಖಲು

0


ಬೆಳ್ತಂಗಡಿ: ವಿದ್ಯಾರ್ಥಿನಿ ಯೊಬ್ಬಳನ್ನು ಹಿಂಬಾಲಿಸಿ ಯುವಕನೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿ ಬ್ಯಾಗ್ ಎಳೆದು ತೊಂದರೆ ನೀಡಿರುವ ಕುರಿತು ವೇಣೂರು ಠಾಣೆಗೆ ದೂರು ದಾಖಲಾಗಿದ್ದು ಪ್ರಕರಣ‌ ದಾಖಲಿಸಲಾಗಿದೆ.
ಮೂಡುಬಿದಿರೆಯ ಕಾಲೇಜೊಂದರ ವಿದ್ಯಾರ್ಥಿನಿಗೆ ಪರಿಚಯಸ್ಥ ವೇಣೂರು ಗ್ರಾಮದ ಶಿವಾಜಿನಗರ ಕಾಲೋನಿ ನಿವಾಸಿ ಆಸ್ಪಕ್ (27) ಎಂಬಾತನೇ ಕಿರುಕುಳ ನೀಡಿದ ಆರೋಪಿಯಾಗಿದ್ದಾನೆ. ಬುಧವಾರ ಮೂಡುಬಿದ್ರೆಯಿಂದ ವೇಣೂರಿಗೆ ಬಸ್ಸಿನಲ್ಲಿ ಬರುವಾಗ ಆಕೆ ಕುಳಿತಿದ್ದ ಸೀಟಿನ ಬಳಿ ನಿಂತುಕೊಂಡು ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬ್ಯಾಗ್ ಎಳೆದು ತೊಂದರೆ ನೀಡಿರುವ ಕುರಿತು ದೂರಿನಲ್ಲಿ ತಿಳಿಸಲಾಗಿದೆ. ಈತ ವಿದ್ಯಾರ್ಥಿ ನಿಗೆ ಪರಿಚಯಸ್ಥನಾಗಿದ್ದು ಕಾಣಸಿಕ್ಕಿದಾಗ ಮಾತನಾಡುತ್ತಿದ್ದರು ಆದರೆ ಆತನ ವರ್ತನೆ ಸರಿಯಿರದ ಕಾರಣ ಆತನಲ್ಲಿ ಮಾತನಾಡುವುದನ್ನು ನಿಲ್ಲಿಸಿದ್ದರು. ಈ ಬಗ್ಗೆ ಮನೆಯವರಿಗೂ ಮಾಹಿತಿ ನೀಡಿದ್ದರು. ಆದರೂ ಆತ ಹಿಂಬಾಲಿಸಿ ಬಂದು ತೊಂದರೆ ನೀಡಿದ್ದ ಈ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ‌ ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version