Home ಅಪಘಾತ ಬೆಳ್ತಂಗಡಿ; ವಿದ್ಯುತ್ ಕಂಬ ಮೇಲೆತ್ತುವ ವೇಳೆ ತಲೆಗೆ ಕಂಬ ಬಿದ್ದು ವ್ಯಕ್ತಿ ಸಾವು

ಬೆಳ್ತಂಗಡಿ; ವಿದ್ಯುತ್ ಕಂಬ ಮೇಲೆತ್ತುವ ವೇಳೆ ತಲೆಗೆ ಕಂಬ ಬಿದ್ದು ವ್ಯಕ್ತಿ ಸಾವು

0

ಬೆಳ್ತಂಗಡಿ: ವಿದ್ಯುತ್ ಕಂಬವನ್ನು ಮೇಲಕ್ಕೆ ಎತ್ತುವ ವೇಳೆ ಕಂಬವು ತಲೆಗೆ ಬಡಿದು ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಸೋಮವಾರ ಸಂಜೆ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಕೊಕ್ಕಡ ಗ್ರಾಮದ ಮಹಾವೀರ ಕಾಲೋನಿ ನಿವಾಸಿ ಶಿವಪ್ಪ(40) ಎಂದು ಗುರುತಿಸಲಾಗಿದೆ.
ಇವರು ಪುರುಷೋತ್ತಮ ಎಂಬ ಗುತ್ತಿಗೆದಾರರ ಕೆಳಗೆ ಕಳೆದ ಕೆಲವು ವರ್ಷಗಳಿಂದ ಕೂಲಿ ಕಲಸ ಮಾಡುತ್ತಿದ್ದರು. ಸೋಮವಾರ ಇವರು ಕೊಕ್ಕಡ ಶ್ರೀರಾಮ ಭಜನಾಮಂದಿರದ ಬಳಿ ವಿದ್ಯುತ್ ಕಂಬವನ್ನು ಎತ್ತುವ ವೇಳೆ ಯಾವುದೇ ಸುರಕ್ಷತಾ ಪರಿಕರಗಳನ್ನು ಧರಿಸದೆ ಕೆಲಸ ಮಾಡುತ್ತಿದ್ದರು.
ಈ ವೇಳೆ ಕಂಬವು ಅವರ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version