Home ಅಪಘಾತ ಪಿಲ್ಯ ಕಾರುಗಳ ನಡುವೆ ಅಪಘಾತ ಮಗು ಸೇರಿದಂತೆ ಹಲವರಿಗೆ ಗಾಯ

ಪಿಲ್ಯ ಕಾರುಗಳ ನಡುವೆ ಅಪಘಾತ ಮಗು ಸೇರಿದಂತೆ ಹಲವರಿಗೆ ಗಾಯ

23
0

ಬೆಳ್ತಂಗಡಿ: ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಮಗು ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ಭಾನುವಾರ ಸಂಜೆ ಅಳದಂಗಡಿ ಪಿಲ್ಯ ಸಮೀಪ ನಡೆದಿದೆ.

ಉಡುಪಿ ಕಡೆಯಿಂದ ಬರುತಿದ್ದ ಕಾರು ಬೆಳ್ತಂಗಡಿ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಕಾರಿನ ನಡುವೆ ಪಿಲ್ಯ ಸಮೀಪದ ಗೋಳಿ ಕಟ್ಟೆ ನಾವರ ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿ ಅಪಘಾತ ನಡೆದಿದೆ.ಅಪಘಾತದ ರಭಸಕ್ಕೆ ಇಕೋ ಕಾರಿನಲ್ಲಿದ್ದ ಮಗು ಸೇರಿದಂತೆ ನಾಲ್ವರಿಗೆ ಗಾಯಗಳಾಗಿದ್ದು ಇಬ್ಬರು ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ಗಾಯಗೊಂಡವರನ್ನುಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವೇಣೂರು ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.ಕಾರಿನಲ್ಲಿದ್ದವರ ಮಾಹಿತಿ ತಿಳಿದು ಬರಬೇಕಾಗಿದೆ.

LEAVE A REPLY

Please enter your comment!
Please enter your name here