Home ರಾಷ್ಟ್ರ/ರಾಜ್ಯ ಬೆಳ್ತಂಗಡಿ; ಮಲೆನಾಡಿನ ನಕ್ಸಲ್ ಚಳವಳಿಗೆ ಬೀಳಲಿದೆ ಪೂರ್ಣ ವಿರಾಮ, ಕುತ್ಲೂರಿನ ಸುಂದರಿ ಸೇರಿದಂತೆ ಐವರು ನಕ್ಸಲರ...

ಬೆಳ್ತಂಗಡಿ; ಮಲೆನಾಡಿನ ನಕ್ಸಲ್ ಚಳವಳಿಗೆ ಬೀಳಲಿದೆ ಪೂರ್ಣ ವಿರಾಮ, ಕುತ್ಲೂರಿನ ಸುಂದರಿ ಸೇರಿದಂತೆ ಐವರು ನಕ್ಸಲರ ಶರಣಾಗತಿಗೆ ಕ್ಷಣಗಣನೆ

72
0

ಬೆಳ್ತಂಗಡಿ : ಕರ್ನಾಟಕದ ಮಲೆನಾಡಿನಲ್ಲಿ ಎರಡು ದಶಕದ ಹಿಂದೆ ಬೇರುಬಿಟ್ಟ ನಕ್ಸಲ್ ಚಳವಳಿಗೆ ಇದೀಗ ಪೂರ್ಣವಿರಾಮ ಬೀಳುವ ಕಾಲ ಸನ್ನಿಹಿತವಾಗಿದೆ.ಮಲೆನಾಡಿನ ಆದಿವಾಸಿಗಳ ಬದುಕುವ ಹಕ್ಕಿಗಾಗಿ ರೂಪಗೊಂಡ ಹೋರಾಟಗಳು ಅಂತಿಮವಾಗಿ ನಕ್ಸಲ್ ಚಳವಳಿಯಾಗಿ ರೂಪಾಂತರಗೊಂಡು ಮಲೆನಾಡಿನಲ್ಲಿ ಒಂದು ರಕ್ತಸಿಕ್ತ ಅಧ್ಯಾಯವನ್ನು ಆರಂಭಿಸಿತ್ತು. ನಕ್ಸಲ್ ದಾರಿ ಹಿಡಿದ ಹಲವರು ಯುವಕರು ಪೊಲೀಸರೊಂದಿಗಿನ ಎನ್ ಕೌಂಟರ್ ನಲ್ಲಿ ಜೀವ ಕಳೆದುಕೊಂಡರು, ಹಲವರು ಪೊಲೀಸರು ನಕ್ಸಲರ ಗುಂಡಿಗೆ ಬಲಿಯಾದರು. ಮಾಹಿತಿದಾರರು ಎಂಬ ಆರೋಪದಲ್ಲಿ ನಕ್ಸಲರು ಹಲವರ ಜೀವಗಳನ್ನು ಬಲಿ ಪಡೆದರು. ದಶಕದ ಹಿಂದೆ ಮಲೆನಾಡಿನ ನಕ್ಸಲ್ ಹೋರಾಟ ಎರಡು ಕವಲುಗಳಾಗಿ ಒಡೆದು ಕರ್ನಾಟಕದ ಒ‌ದು ತಂಡ ಶರಣಾಗುವುದ ರೊಂದಿಗೆ ಹೋರಾಟ ಬಹುತೇಕ ದುರ್ಬಲಗೊಂಡಿತ್ತು. ಇದೀಗ ಉಳಿದ ಆರು ಮಂದಿ ನಕ್ಸಲರೂ ಶರಣಾಗಲು ನಿರ್ಧರಿಸಿದ್ದು ರಾಜ್ಯ ಸರಕಾರ ರಚಿಸಿರುವ ಶರಣಾಗತಿ ಸಮಿತಿಯ ಸಹಯೋಗದೊಂದಿಗೆ ಸರಜಾರದ ಮುಂದೆ ಶರಣಾಗತರಾಗಿ ಮುಖ್ಯ ವಾಹಿನಿಗೆ ಬರಲಿದ್ದಾರೆ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಬಕ್ಕಡಿಬೈಲು ಮುಂಡಾಗಾರು ಲತಾ@ ಲೋಕಮ್ಮ@ಶ್ಯಾಮಲಾ,

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ನಕ್ಸಲ್ ನಾಯಕಿ ಸುಂದರಿ @ ಗೀತಾ ,ಚಿಕ್ಕಮಗಳೂರು ಜಿಲ್ಲೆಯ ಭದ್ರಸೈಟು,ಬಾಳೆಹೊಳೆಯ ಎಂ.ವನಜಾಕ್ಷಿ ಜ್ಯೋತಿ@ ಕಲ್ಪನ,
ಮಾರೆಪ್ಪ ಅರೋಲಿ, ತಮಿಳುನಾಡು ಮೂಲದ ಕೆ.ವಸಂತ, ಹಾಗೂ ಕೇರಳದ ವಯನಾಡಿನ ಟಿ.ಎನ್.ಜಿಶಾ ಅವರು ಶರಣಾಗತಿ ಅಗಲಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಕರ್ನಾಟಕ ಸರಕಾರ ರಚಿಸಿರುವ ನಕ್ಸಲ್ ಪುನರ್ವಸತಿ ಸಮಿತಿ ನಿಯೋಗದೊಂದಿಗೆ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಅವರೊಂದಿಗೆ ಮಾತುಕತೆ ನಡೆಸಿರುವ ನಕ್ಸಲರ ತಂಡ ಶರಣಾಗತಿಗೆ ಸಮ್ಮತಿಸಿದ್ದಾರೆ. ಈ ಬಗ್ಗೆ ನಕ್ಸಲ್ ಪುನರ್ ವಸತಿ ಸಮಿತಿಗೆ ಪತ್ರವನ್ನೂ ಬರೆದು ತಾವು ಶರಣಾಗಲು ಸಿಧದರಿರುವುದಾಗಿ ತಿಳಿಸಿದ್ದಾರೆ. ನಕ್ಸಲ್ ಪುನರ್ವಸತಿ ಸಮಿತಿ ಸದಸ್ಯರಾದ ಡಾ.ಬಂಜಗೆರೆ ಜಯಪ್ರಕಾಶ್, ಪಾರ್ವತೀಶ ಬಿಳಿದಾಲೆ ಹಾಗೂ ಕೆ.ಪಿ ಶ್ರೀಪಾಲ್ ಅವರು ನಕ್ಸಲರ ಶರಣಾಗತಿಗಾಗಿ ಶ್ರಮಿಸಿದ್ದರು. ಇವರೊಂದಿಗೆ ಇತರ ಸಂಘಟನೆಗಳೂ ಕೈ ಜೋಡಿಸಿ ಶ್ರಮಿಸಿದ ಫಲವಾಗಿ ಇದು ಸಾಧ್ಯವಾಗುತ್ತಿದೆ.
ಶರಣಾಗುತ್ತಿರುವ ನಕ್ಸಲರು ಸರಕಾರಕ್ಕೆ ಪತ್ರ ಬರೆದು ತಮ್ಮನ್ನು ಗೌರವ ಯುತವಾಗಿ ನಡೆಸಿಕೊಳ್ಳುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ
ನಿರುದ್ಯೋಗಿಗಳಿಗೆ ಉದ್ಯೋಗ, ತಮ್ಮ ಮೇಲಿನ ಸುಳ್ಳು ಕೇಸ್​ಗಳನ್ನು ಖುಲಾಸೆಗೊಳಿಸುವುದು ಮತ್ತು ವಿಕ್ರಂಗೌಡ ಎನ್​​ಕೌಂಟರ್​​ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುವಂತೆ ಒತ್ತಾಯಿಸಿದ್ದಾರೆ.

ನಕ್ಸಲರು ಬರೆದ ಪತ್ರದಲ್ಲಿ ಏನಿದೆ:
ಆರು ಜನರಾದ ನಾವು ಸಂಪೂರ್ಣ ಸಮ್ಮತಿ ಮತ್ತು ಏಕ ಅಭಿಪ್ರಾಯದ ಮೇರೆಗೆ ಈ ಪತ್ರವನ್ನು ತಮಗೂ ಆ ಮೂಲಕ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಸರ್ಕಾರಿಗಳಗೆ ಬರೆಯುತ್ತಿದ್ದೇವೆ. ದೇಶದ ಇಂದಿನ ಸಂದರ್ಭ, ಚಳುವಳಿಗಳು ಪಡೆಯುತ್ತಿರುವ ರೂಪಾಂತರ, ಸಾಮಾಜಿಕ ಅಗತ್ಯ ಎಲವನ್ನು ಗಮನದಲ್ಲಿ ಇಟ್ಟುಕೊಂಡು ಸಶಸ್ತ್ರ ಹೋರಾಟದ ಮಾರ್ಗವನ್ನು ಬದಲಾಯಿಸಿ ಪ್ರಜಾತಾಂತ್ರಿಕ ಮುಖ್ಯವಾಹಿನಿಗೆ ಮರಳುವುದು ಒಳ್ಳೆಯದು ಮತ್ತು ಅದಕ್ಕೆ ಸಾಧ್ಯತೆ ಇದೆ ಎಂದು ಮನವರಿಕೆಯಾಗಿದೆ. ನಾವು ಯಾವುದೇ ಒತ್ತಡವಿಲ್ಲದೆ. ಸ್ವ-ಇಚ್ಛೆಯಿಂದ ಮುಖ್ಯವಾಹಿನಿಗೆ ಬರಲು ಬಯಸುತ್ತಿದ್ದೇವೆ. ಆದರೆ ಈ ಸಂದರ್ಭದಲ್ಲಿ ಕೆಲವು ಖಚಿತ ಸ್ಪಷ್ಠೀಕರಣವನ್ನು ಸರ್ಕಾರ ಮತ್ತು ಸಂಬಂಧಿತ ಸಮಿತಿಯಿಂದ ಬಯಸುತ್ತಿದ್ದೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ.

LEAVE A REPLY

Please enter your comment!
Please enter your name here