

ಬೆಳ್ತಂಗಡಿ: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಂತ ಸಮರ್ಪಕವಾಗಿ ಅನುಷ್ಠಾನ ಗೊಳಿಸಲಾಗಿದ್ದು ತಾಲೂಕಿಗೆ ಈ ವರೆಗೆ ರೂ290 ಕೋಟಿ ಗೂ ಅಧಿಕ ಗ್ಯಾರಂಟಿ ಹಣ ಬಂದಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಹೇಳಿದರು.
ಅವರು ಜ.23ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಚಾರ ತಿಳಿಸಿದರು.
ಗೃಹ ಜ್ಯೋತಿ ಯೋಜನೆ ಯಲ್ಲಿ ಅತಿ ಹೆಚ್ಚು 75,734 ಕುಟುಂಂಬಗಳು ಇದರ ಪ್ರಯೋಜನ ಪಡೆದಿದ್ದಾರೆ. ಪ್ರತಿಯೊಂದು ಯೋಜನೆಯಲ್ಲಿಯೂಶೇ 90 ಕ್ಕಿಂತ ಹೆಚ್ಚು ಸಾಧನೆ ಮಾಡಲಾಗಿದ್ದು ಇನ್ನು ಯಾವುದಾದರೂ ಕಾರಣದಿಂದ ಯೋಜನೆಯಿಂದ ವಂಚಿತರಾದವರಿದ್ದರೆ ಅವರಿಗೆ ನೆರವಾಗಲು ಎಲ್ಲ ಹೋಬಳಿ ಗಳಲ್ಲಿಯು ಗ್ಯಾರಂಟಿ ಅನುಷ್ಠಾನ ಶಿಬಿರವನ್ನು ನಡೆಸುವುದಾಗಿಯೂ ಅವರು ತಿಳಿಸಿದರು.
ಯಾವ ಯೋಜನೆಯಲ್ಲಿ ಎಷ್ಟು ಬಂದಿದೆ ಅನುದಾನ
ಬೆಳ್ತಂಗಡಿ ತಾಲೂಕಿನಲ್ಲಿ 58,315ಮಂದಿ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದು 151,12,68,000 ರೂ ಹಣ ವಿತರಣೆಯಾಗಿದೆ.
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 45,570 ಕುಟುಂಬಗಳಿಗೆ ಈ ವರೆಗೆ ಒಟ್ಟು 3,17,29,650 ರೂ ಸಂದಾಯವಾಗಿದೆ.
ಗೃಹ ಜ್ಯೋತಿ ಯೋಜನೆಯಲ್ಲಿ ಒಟ್ಟು 77,145 ಕುಟುಂಬಗಳು ಪ್ರಯೋಜನ ಪಡೆದುಕೊಂಡಿದ್ದು ಒಟ್ಟು 56,70,81,192 ರೂಗಳನ್ನು ನೀಡಲಾಗಿದೆ. ಯುವ ನಿಧಿ ಯೋಜನೆಯ ಅಡಿಯಲ್ಲಿ ಒಟ್ಟು 568 ಮಂದಿ ಫಲಾನುಭಾವಿಗಳು 71,73,000 ರೂಗಳನ್ನು ಪಡೆದಿದ್ದಾರೆ .
ಇದಲ್ಲದೆ ಧರ್ಮಸ್ಥಳ ಡಿಪ್ಪೋದಿಂದ 46,59,37,531ರೂ ವನ್ನು ನೀಡಲಾಗಿದೆ.

ಜ.28 ಇಂದಬೆಟ್ಟುವಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಶಿಬಿರ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪರಿಣಮಕಾರಿಯಾಗಿ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಶಿಬಿರವು ಜ.28 ರಂದು ಇಂದಬೆಟ್ಟು ಸಂತ ಕ್ಷೇವಿಯಾರ್ ಚರ್ಚ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಈ ಅನುಷ್ಠಾನ ಶಿಬಿರದಲ್ಲಿ ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ನಡ, ನಾವೂರು, ಮತ್ತು ಇಂದಬೆಟ್ಟು ಗ್ರಾಮಗಳ ಪಂಚ ಗ್ಯಾರಂಟಿ ಯೋಜನೆಗಳ ಪಲಾನುಭವಿಗಳು ಭಾಗವಹಿಸಿ ಮಾಹಿತಿ ಪಡೆಯಬಹುದು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿ ಮಾಹಿತಿ ನೀಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾದ್ಯಕ್ಷ ಶೇಖರ್ ಕುಕ್ಕೇಡಿ, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಸೌಮ್ಯ ಲಾಯಿಲ, ಮೇರಿಟ ಪಿಂಟೋ, ಯತೀಶ್ ಧರ್ಮಸ್ಥಳ, ವೀರಪ್ಪ ಮೋಯಿಲಿ, ವಾಸುದೇವ ಭಟ್, ನೇಮಿರಾಜ್ ಕಿಲ್ಲೂರು, ವಂದನಾ ಭಂಢಾರಿ ಉಪಸ್ಥಿತರಿದ್ದರು.
