Home ಸ್ಥಳೀಯ ಸಮಾಚಾರ ಉಜಿರೆ ಬೆನಕ ಆಸ್ಪತ್ರೆಯಲ್ಲಿ ರಜತ ಸಂಭ್ರಮ; ಗ್ರಾಮೀಣ ಪ್ರದೇಶದಲ್ಲಿ ನೀಡುತ್ತಿರುವ ಸೇವೆ ಎಲ್ಲರಿಗೂ ಮಾದರಿ: ದಿನೇಶ್...

ಉಜಿರೆ ಬೆನಕ ಆಸ್ಪತ್ರೆಯಲ್ಲಿ ರಜತ ಸಂಭ್ರಮ; ಗ್ರಾಮೀಣ ಪ್ರದೇಶದಲ್ಲಿ ನೀಡುತ್ತಿರುವ ಸೇವೆ ಎಲ್ಲರಿಗೂ ಮಾದರಿ: ದಿನೇಶ್ ಗುಂಡೂರಾವ್

17
0

ಬೆಳ್ತಂಗಡಿ;
“ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆ, ಸಂಶೋಧನೆ, ಆವಿಷ್ಕಾರ, ನೂತನ ಯಂತ್ರೋಪಕರಣಗಳ ಬಳಕೆಯಿಂದ ರೋಗಿಗಳಿಗೆ ತ್ವರಿತ ಚಿಕಿತ್ಸೆ ಸಿಗುವಂತಾಗಿದೆ. ರೋಗಿಗಳನ್ನು ರಕ್ಷಿಸುವ ಶಕ್ತಿ ಆಸ್ಪತ್ರೆಗಳಿಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಶನಿವಾರ ಉಜಿರೆಯ ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ರಜತ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ವಿಸ್ತೃತ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
“ಗ್ರಾಮೀಣ ಪ್ರದೇಶದಲ್ಲಿ ಉನ್ನತ ಮಟ್ಟದ ಆಸ್ಪತ್ರೆಗಳ ಬೇಡಿಕೆ ಹೆಚ್ಚುತ್ತಿದ್ದು, ಬೆನಕ ಆಸ್ಪತ್ರೆ ಇದಕ್ಕೆ ಉತ್ತಮವಾಗಿ ಸ್ಪಂದಿಸಿದೆ. ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ರಿಯಾಯಿತಿ ದರದ ಸೇವೆ ಸಿಗುವಂತಾಗಲಿ. ಬೆನಕ ಆಸ್ಪತ್ರೆಯ ಸೇವೆ, ರೋಗಿಗಳ ಕಾಳಜಿ, ವ್ಯವಸ್ಥೆಗಳು, ಪ್ರಶಂಸನೀಯ. ಬದುಕಿನಲ್ಲಿ ಬದಲಾವಣೆಗಳು ಆಗುತ್ತಿದ್ದು ಜನರ ಆಯುಷ್ಯ ಪ್ರಮಾಣ ಅಧಿಕವಾಗಲು ಆಸ್ಪತ್ರೆಗಳು ನೀಡುವ ಸೇವೆ ಪ್ರಾಮುಖ್ಯ ವಾದುದು” ಎಂದು ಹೇಳಿದರು.
ರಜತ ಸಂಭ್ರಮ ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ
ತುರ್ತು ಚಿಕಿತ್ಸಾ ವಿಭಾಗ ಉದ್ಘಾಟಿಸಿದ
ಎಂಎಲ್ ಸಿ ಪ್ರತಾಪ ಸಿಂಹ ನಾಯಕ್ ಮಾತನಾಡಿ ಮಾತನಾಡಿ ಶುಭ ಹಾರೈಸಿದರು.
ಸೀತಾರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ನ್ಯಾಷನಲ್ ಹೆಲ್ತ್ ಮಿಷನ್ ನಿರ್ದೇಶಕ ಡಾ. ನವೀನ್ ಭಟ್, ಉಜಿರೆ ಗ್ರಾಫಂ ಅಧ್ಯಕ್ಷೆ ಉಷಾಕಿರಣ ಕಾರಂತ್, ಉಪಾಧ್ಯಕ್ಷ ರವಿಕುಮಾರ್ ಬರೆಮೇಲು,
ಡಾ. ನಮಿಷಾ ಭಟ್, ಡಾ. ಭಾರತಿ ಜಿ.ಕೆ., ಡಾ. ಅಂಕಿತಾ ಜಿ. ಭಟ್
ಡಾ. ಆದಿತ್ಯ ರಾವ್, ಡಾ. ರೋಹಿತ್ ಜಿ.ಭಟ್,ಡಾ.ನವ್ಯಾ ಮಾಜಿ ಎಂಎಲ್ ಸಿ ಕೆ. ಹರೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಡಾ. ಗೋಪಾಲಕೃಷ್ಣ ಸ್ವಾಗತಿಸಿದರು.
ಆಸ್ಪತ್ರೆಯ ಪಿಆರ್ ಒ ಎಸ್. ಜಿ .ಭಟ್ ಮತ್ತು ವಕೀಲ ಧನಂಜಯ್ ರಾವ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here