ಬೆಳ್ತಂಗಡಿ; ಕಡಿರುದ್ಯಾವರ ಗ್ರಾಮದಲ್ಲಿ ಕಾಡಾನೆಗಳು ಕೃಷಿಭೂಮಿಗೆ ನುಗ್ಗಿ ಕೃಷಿಗೆ ಹಾನಿಯುಂಟು ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಇಲ್ಲಿನ ಪಣಿಕಲ್ಲು ನಿವಾಸಿ ಕೃಷ್ಣ ಭಟ್ ಎಂಬವರ ತೋಟಕ್ಕೆ ಕಾಡಾನೆಗಳು ನುಗ್ಗಿದ್ದು ಗೋಟದಲ್ಲಿದ್ದ ಬಾಳೆ ಗಿಡಗಳನ್ನು ಪುಡಿ ಗೈದಿದೆ. ಐದು ಅಡಿಕೆಮರಗಳನ್ನು ಮುರಿದು ಹಾಕಿದೆ. ತೋಟದಲ್ಲಿ ನೀರಿನ ಪೈಪ್ ಹಾಗೂ ಸ್ಪ್ರಿಂಕ್ಲರ್ ಗಳನ್ನು ಹಾನಿಗೊಳಿಸಿದೆ.