

ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ ) ತೋಟತ್ತಾಡಿ,ಚಿಬಿದ್ರೆ ಇದರ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂದಾಜು 80 ಲಕ್ಷದ ಸಮುದಾಯ ಭವನಕ್ಕೆ ಕರ್ನಾಟಕ ಸರ್ಕಾರದಿಂದ ಗರಿಷ್ಠ ಅನುದಾನ ನೀಡುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮೂಲಕ ಸರ್ಕಾರಕ್ಕೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ತೋಟತ್ತಾಡಿ ಇದರ ಅಧ್ಯಕ್ಷರಾದ ಸನತ್ ಕುಮಾರ್ ಮೂರ್ಜೆ ನಿಯೋಗದಿಂದ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಸಂಘದ ಕಾರ್ಯದರ್ಶಿ ಹರೀಶ್ ಪೂಜಾರಿ ಚಿಬಿದ್ರೆ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಪ್ರೇಮ ಹೊಸಮನೆ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷರಾದ ಸುಕೇಶ್ ಪೂಜಾರಿ ಪರಾರಿ ಸಂಘದ ಪದಾಧಿಕಾರಿಗಳಾದ ಸೀತಾರಾಮ ಕಜೆ, ಓಬಯ್ಯ ಪೂಜಾರಿ ಅಂತರ, ದಯಾನಂದ ಪೂಜಾರಿ ಗುವೇದಕಂಡ, ಗಿರೀಶ್ ಪೂಜಾರಿ ಪೊಯ್ಯೇದಡ್ಡ, ಸತೀಶ್ ಪೂಜಾರಿ ಮೂರ್ಜೆ, ಶ್ರೀಮತಿ ಉಷಾ ಡಿ.ಮಜಲು, ಶ್ರೀಮತಿ ವಿನುತಾ ಡಿ.ಮಜಲು ಶ್ರೀಮತಿ ಹರಿಣಾಕ್ಷಿ ಡಿ.ಮಜಲು, ಶ್ರೀಮತಿ ಪ್ರಮೀಳಾ ದೇಜಪ್ಪ ಕಕ್ಕಿಂಜೆ, ಶ್ರೀಮತಿ ಪ್ರೇಮ ಬರಮೇಲು, ಶ್ರೀಮತಿ ಶೋಭಾ ಬರಮೇಲು, ಶ್ರೀಮತಿ ಸುಮತಿ ಬರಮೇಲು ಉಪಸ್ಥಿತರಿದ್ದರು.
