Home ರಾಜಕೀಯ ಸಮಾಚಾರ ಕೆ ವಸಂತ ಬಂಗೇರ ಹುಟ್ಟು ಹಬ್ಬದ ಪ್ರಯುಕ್ತ ಬ್ರಹತ್ ರಕ್ತದಾನ ಶಿಬಿರ

ಕೆ ವಸಂತ ಬಂಗೇರ ಹುಟ್ಟು ಹಬ್ಬದ ಪ್ರಯುಕ್ತ ಬ್ರಹತ್ ರಕ್ತದಾನ ಶಿಬಿರ

34
0

ಬೆಳ್ತಂಗಡಿ: ಸುಮಾರು 5 ದಶಕಗಳ ಕಾಲ ರಾಜಕೀಯ ರಂಗದಲ್ಲಿ ಸೇವೆ ಸಲ್ಲಿಸಿ ಜನರ ಸೇವೆಗಾಗಿ ತನ್ನನ್ನು ಮುಡಿಪಾಗಿಟ್ಟ ಕಳೆದ ವರ್ಷ ಮೇ 8 ರಂದು ವಿಧಿವಶರಾದ ಬೆಳ್ತಂಗಡಿ ತಾಲೂಕಿನ ಸರ್ವಾಂಗೀಣ ಅಬಿವ್ರುದ್ದಿಯ ರುವಾರಿ, ಬಡವರ ಬಂದು ,ದೀನ ದಲಿತರ ಕಣ್ಮಣಿ ಮಾಜಿ ಶಾಸಕ ಕೀರ್ತಿಶೇಷರಾದ ಕೆ ವಸಂತ ಬಂಗೇರರ 79 ನೇ ಹುಟ್ಟುಹಬ್ಬದ ಪ್ರಯುಕ್ತ ಬ್ರಹತ್ ರಕ್ತದಾನ ಶಿಭಿರವನ್ನು ಜ 15 ರಂದು ಶ್ರಿ ಗುರುನಾರಾಯಣ ಸ್ವಾಮಿ ಸಭಾಭವನದಲ್ಲಿ ಹಮ್ನಿಕೊಳ್ಳಲಾಗಿದೆ ಎಂದು ಕೆ ವಸಂತ ಬಂಗೇರ ಅಭಿಮಾನಿ ಬಳಗದ ಪ್ರದಾನ ಕಾರ್ಯದರ್ಶಿ ಮನೋಹರ್ ಕುಮಾರ್ ಇಳಂತಿಲ ಹೇಳಿದರು. ‌‌‌ ಅವರು ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಶ್ರಿ ಗುರುನಾರಾಯಣ ಸ್ವಾಮಿ ಸೇವಾ ಸಂಘ ರಿ, ಬೆಳ್ತಂಗಡಿ, ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ನಡೆಯಲಿದ್ದು ಬಂಗೇರ ಅಬಿಮಾನಿಗಳು, ಶ್ರಿ ಗುರುದೇವ ಕಾಲೇಜಿನ ವಿದ್ಯಾರ್ಥಿಗಳು ,ಸಾರ್ವಜನಿಕರು ರಕ್ತದಾನ ಮಾಡಲಿದ್ದು ರಕ್ತದಾನದಂತ ಪುಣ್ಯಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು. ಇದೇ ಸಂದರ್ಭದಲ್ಲಿ ವಸಂತ ಬಂಗೇರರ ಕುರಿತು ರಾಣಿ ಅಬ್ಬಕ್ಕ ತುಳು ಅದ್ಯಯನ ಪೀಠ ಬಂಟ್ವಾಳ ಇದರ ಮುಖ್ಯಸ್ಥ ಡಾ ತುಕರಾಮ ಪುಜಾರಿ ಇವರಿಂದ ವಿಷೇಶ ಉಪನ್ಯಾಸ ನಡೆಯಲಿದೆ. ಮತ್ತು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಿದೆ. ಸಮಿತಿ ವತಿಯಿಂದ ದಯಾ ವಿಷೇಶ ಶಾಲೆಯ ಮಕ್ಕಳಿಗೆ ಊಟದ ವ್ಯವಸ್ಥೆ ಹಮ್ಮಿಕೊಳ್ಳಲಾಗಿದೆ ಎಂದರು. ಗೋಷ್ಟಿಯಲ್ಲಿ ಸಮಿತಿಯ ಅದ್ಯಕ್ಷ ಈಶ್ವರ ಭಟ್ ಮಾಯಿಲತ್ತೋಡಿ, ಕೋಶಾದಿಕಾರಿ ಶೇಖರ್ ಕುಕ್ಕೇಡಿ, ಉಪಾದ್ಯಕ್ಷ ಲೋಕೇಶ್ ಗೌಡ, 75 ಹುಟ್ಟು ಹಬ್ಬ ಆಚರಣಾ ಸಮಿತಿಯ ಪ್ರದಾನ ಸಂಚಾಲಕ ದೇವಿಪ್ರಸಾದ್, ಅಬಿಮಾನಿಗಳಾದ ಲಕ್ಮಣ ಗೌಡ, ಯಶೋದರ ಬಂಗೇರ ಚಾರ್ಮಾಡಿ, ಅಶ್ರಪ್ ನೆರಿಯ, ಬೆಳ್ತಂಗಡಿ ಶ್ರಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅದ್ಯಕ್ಷ ಜಯವಿಕ್ರಮ ಕಲ್ಲಾಪು ,ಉಸ್ಥಿತರಿದ್ದರು

LEAVE A REPLY

Please enter your comment!
Please enter your name here