Home ಸ್ಥಳೀಯ ಸಮಾಚಾರ ಕೆ.ಎಸ್.ಎಂ.ಸಿ.ಎ ವತಿಯಿಂದ ಕ್ರಿಸ್ಮಸ್ ಕಪ್ ಕ್ರೀಡಾಕೂಟ

ಕೆ.ಎಸ್.ಎಂ.ಸಿ.ಎ ವತಿಯಿಂದ ಕ್ರಿಸ್ಮಸ್ ಕಪ್ ಕ್ರೀಡಾಕೂಟ

35
0

ಬೆಳ್ತಂಗಡಿ; ಕೆ.ಎಸ್. ಎಂ ಸಿ ಎ ವತಿಯಿಂದ ಕ್ರಿಸ್ಮಸ್ ಕಪ್ 2024 ಬೆಳ್ತಂಗಡಿ ಧರ್ಮಪ್ರಾಂತ್ಯದ ಮಟ್ಟದ ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ಶನಿವಾರ ತೋಟತ್ತಾಡಿಯ ಸೈಟ್ ಸಾವಿಯೋ ಶಾಲಾ ವಠಾರದಲ್ಲಿ ನಡೆಯಿತು.


ಸಮಾರೋಪ ಸಮಾರಂಭದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ ಲಾರೆನ್ಸ್ ಮುಕ್ಕುಯಿ ಅವರು ವಿಜೇತ ತಂಡಗಳಿಗೆ
ಬಹುಮಾನಗಳನ್ನು ವಿತರಿಸಿ ಮಾತನಾಡಿ ಕೆ.ಎಸ್. ಎಂ‌.ಸಿ ಎ ಸಂಘಟನೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಕಿ ಕ್ರೀಡಾಕೂಟವನ್ನು ಆಯೋಜಿನಸಿದ್ದಾರೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದರು.

ಕೆ.ಎಸ್.ಎಂ.ಸಿ ಎ ಅಧ್ಯಕ್ಷ ಬಿಟ್ಟಿ ನೆಡುನಿಲಂ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಕೆ.ಎಸ್.ಎಂ.ಸಿ.ಎ ಯ ನಿರ್ದೇಶಕರಾದ ಫಾಆದರ್ಶ್ ಜೋಸೆಫ್ ಮಾತನಾಡಿ ಶುಭ ಹಾರೈಸಿದರು.

ಕ್ರೀಡಾಕೂಟದ ಸಂಯೋಜಕ ವೇದಿಕೆಯಲ್ಲಿ ತೋಟತ್ತಾಡಿ ಚರ್ಚಿನ ಧರ್ಮಗುರುಗಳಾದ ವಂ.ಫಾ ಜೋಸ್ ಪೂವತ್ತಿಂಗಲ್, ಫಾ. ಸುನಿಲ್ ಐಸಕ್ ಕ್ರೀಡಾಕೂಟದ ಸಂಯೋಜಕ ಜಾರ್ಜ್ ಟಿ.ವಿ ಹಾಗೂ ಇತರರು ಇದ್ದರು.
ಈ ಸಂದರ್ಭದಲ್ಲಿ ಉದನೆಯ ಲೆ.ಕೇಣಲ್ ವಿನೋಜ್ ಉದನೆ, ಮನೋಜ್ ನೆಲ್ಯಾಡಿ, ಬಿಬಿನ್ ಬಜಗೋಳಿ ಅವರನ್ನು ಸನ್ಮಾನಿಸಲಾಯಿತು,

ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷರುಗಳಾದ ಜೈಸನ್ ಪಟ್ಟೇರಿ, ಟೋಮಿ ವೈಪನ, ತೋಟತ್ತಾಡಿ ಘಟಕದ ಅಧ್ಯಕ್ಷ ಡೆನ್ನಿ ಪೈಯಂಪಳ್ಳಿ ಸಂಘಟನೆಯ ಕೇಂದ್ರೀಯ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.


ಬೆಳಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೈಟ್ ಸಾವಿಯೋ ಶಾಲೆಯ ಮುಖ್ಯ ಶಿಕ್ಷಕಿ
ಸಿ. ಮರಿಯ ಎಫ್.ಸಿ.ಸಿ ಉದ್ಘಾಟನೆ ನೆರವೇರಿದರು. ಕೆ.ಎಸ್.ಎಂ.ಸಿ.ಎ ಅಧ್ಯಕ್ಷ ಬಿಟ್ಟಿ ನೆಡುನಿಲಂ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಮುಖಂಡರುಗಳು ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದಲ್ಲಿ
ಅಗಲಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕ್ರೀಡಾಕೂಟದಲ್ಲಿ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಸೈಟ್ ಸೆಬಾಸ್ಟಿಯನ್ ಚರ್ಚ್ ಕಳೆಂಜ ತಂಡ ತನ್ನದಾಗಿಸಿ ಕೊಂಡಿತ್ತು.
ದ್ವಿತೀಯ ಸ್ಥಾನವನ್ನು ಸೈಟ್ ಆಂಟನಿ ಚರ್ಚ್ ತೋಟತ್ತಾಡಿ ತಂಡ ಹಾಗೂ ತೃತೀಯ ಸ್ಥಾನವನ್ನು ಸೈಟ್ ಜಾರ್ಜ್ ಚರ್ಚ್ ಜಡಿಕಲ್ ತಂಡ ಪಡೆದುಕೊಂಡರು. ಪುರುಷರ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಬಟ್ಯಾಲ್ ತಂಡ ತನ್ನದಾಗಿಸಿಕೊಂಡರೆ ದ್ವಿತೀಯ ಸ್ಥಾನವನ್ನು ಮುದೂರು ತಂಡ ಪಡೆದುಕೊಂಡಿತ್ತು, ತೃತೀಯ ಸ್ಥಾನವನ್ನು ಬಜಗೋಳಿ ತಂಡ ಹಾಗೂ ನಾಲ್ಕನೆ ಸ್ಥಾನವನ್ನು ಕಳೆಂಜ ತಂಡ ತನ್ನದಾಗಿಸಿ ಕೊಂಡಿತ್ತು.


ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬಜಗೋಳಿ ತಂಡ ಪಡೆಸುಕೊಂಡರೆ ದ್ವಿತೀಯ ಸ್ಥಾನವನ್ನು ತೋಟತ್ತಾಡಿ ತಂಡ, ತೃತೀಯ ಸ್ಥಾನವನ್ನು ಧರ್ಮಸ್ಥಳ, ಹಾಗೂ ನಾಲ್ಕನೆಯ ಸ್ಥಾನವನ್ನು ಕಳೆಂಜ ತಂಡ ತನ್ನದಾಗಿಸಿಕೊಂಡಿದೆ.
ಪಂದ್ಯಾಟದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ವಿವಿಧ ಚರ್ಚ್ ಗಳ ತಂಡಗಳು ಭಾಗವಹಿಸಿದ್ದವು.

LEAVE A REPLY

Please enter your comment!
Please enter your name here