ಬೆಳ್ತಂಗಡಿ; ಉಜಿರೆ ಹಳೆಪೇಟೆಯಲ್ಲಿ ಕಾರಿಗೆ ಟಿಪ್ಪರ್ ಡಿಕ್ಕಿಹೊಡೆದು ಅಪಘಾತ ಸಂಭವಿಸಿದ್ದು ಕಾರು ಚಾಲಾಯಿಸುತ್ತಿದ್ದ ಮಹಿಖೆ ಗಾಯಗೊಂಡಿದ್ದಾರೆ.
ಬೆಳ್ತಂಗಡಿ ಲಾಯಿಲ ನಿವಾಸಿ ಮುನೀರಾ ಎಂಬವರೇ ಗಾಯಗೊಂಡವರಾಗಿದ್ದಾರೆ
ಟಿಪ್ಪರ್ ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆದಿದ್ದು ಕಾರು ನುಜ್ಜುಗುಜ್ಜಾಗಿದೆ. ಕೂಡಲೇ ಸ್ಥಳೀಯರ ಸಹಕಾರದಿಂದಿಗೆ ಗಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇತರರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಹಳೆಪೇಟೆ ಎಸ್.ಡಿ.ಟಿ.ಯು ಅಟೋ ಚಾಲಕರ ಸಂಘದವರು ಹಾಗೂ ಸ್ಥಳೀಯರು ಸೇರಿ ಕಾರನ್ನು ರಸ್ತೆ ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವುಮಾಡಿ ಕೊಟ್ಟರು.
