ಬಂಗಾಡಿ : ಇಂದಬೆಟ್ಟು, ನಾವೂರು, ಕನ್ಯಾಡಿ, ಮಲವಂತಿಗೆ, ಮಿತ್ತಬಾಗಿಲು ಮತ್ತು ಕಡಿರುದ್ಯಾವರ ಗ್ರಾಮಗಳ ವ್ಯಾಪ್ತಿಗೆ ಒಳಪಟ್ಟ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಇದರ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿ ಡಿ. 8 ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಮತಗಳ ಅಂತರದಲ್ಲಿ ವಿಜಯಶಾಲಿಯಾಗಿದ್ದಾರೆ. ಸಾಲಗಾರ ಸಾಮಾನ್ಯ ಕ್ಷೇತ್ರದಲ್ಲಿ ಆನಂದ ಗೌಡ, ವಸಂತ ಗೌಡ, ಹರೀಶ್ ಸಾಲಿಯಾನ್, ವಿನಯಚಂದ್ರ, ಹರೀಶ್ ಪೂಜಾರಿ, ಪ್ರಮೋದ್ ಕುಮಾರ್, ಸಾಲಗಾರ ಹಿಂದುಳಿದ ವರ್ಗ ಎ ಕ್ಷೇತ್ರದಿಂದ ರಮೇಶ್ ಕೆಂಗಾಜೆ, ಸಾಲಗಾರ ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಶೀನಪ್ಪ ಗೌಡ, ಸಾಲಗಾರ ಮಹಿಳಾ ಕ್ಷೇತ್ರದಿಂದ ಪುಷ್ಪಲತಾ.ಕೆ, ವೇದಾವತಿ, ಸಾಲಗಾರ ಪ. ಜಾತಿ ಕ್ಷೇತ್ರದಿಂದ ರಘುನಾಥ, ಸಾಲಾಗಾರ ಪ. ಪಂಗಡ ಕ್ಷೇತ್ರದಿಂದ ಸತೀಶ್ ನಾಯ್ಕ ಇವರುಗಳು ಬಹುಮತಗಳ ಅಂತರದಿಂದ ವಿಜಯಿಶಾಲಿಯಾಗಿದ್ದಾರೆ
